ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಬಂಟರ ಜೊತೆ ಮಹಾ ಗೃಹಮಂತ್ರಿ

By Mahesh
|
Google Oneindia Kannada News

Maha home minister RR Patil
ಮುಂಬೈ ಸೆ 29 : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ಜೊತೆ ಮಹಾರಾಷ್ಟ್ರದ ಗೃಹಸಚಿವ ಆರ್.ಆರ್ ಪಾಟೀಲ್ ಚರ್ಚೆ ನಡೆಸುತ್ತಿದ್ದ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಸೆಪ್ಟೆಂಬರ್ 11, 2010 ದಿನಾಂಕದಂದು ಈ ದೃಶ್ಯವನ್ನು ಸೆರೆ ಹಿಡಿಯಲಾಗಿರುವ ದೃಶ್ಯಗಳನ್ನು ಸಿಎನ್ಎನ್ ಐಬಿಎನ್ ಸಂಸ್ಥೆ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.

ದಾವೂದ್ ಬಂಟ ಸಲೀಂ ಪಟೇಲ್ ಮತ್ತು ಮೊಬಿನ್ ಖುರೇಷಿ ಜೊತೆ ಗೃಹಸಚಿವ ಪಾಟೀಲ್ ಇದ್ದ ಚಿತ್ರವನ್ನು ಕ್ಯಾಮರದಲ್ಲಿ ಸೆರೆ ಹಿಡಿಯಲಾಗಿದೆ. ಸಲೀಂ ಹೈದರಾಬಾದ್ ಬಾಂಬ್ ಸ್ಪೋಟದಲ್ಲಿ ಬಂಧಿತನಾಗಿದ್ದರೆ ಖುರೇಷಿ ಬಿಜೆಪಿ ಶಾಸಕ ಪ್ರೇಂ ಕುಮಾರ್ ಶರ್ಮಾ ಕೊಲೆ ಪ್ರಕರಣದ ಪ್ರಮುಖ ಕ್ರಿಮಿನಲ್.

ಇದಲ್ಲದೆ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್ ಬ್ಲ್ಯಾಕ್ ಲಿಸ್ಟ್ ಪಟ್ಟಿಯಲ್ಲಿರುವ ಇರ್ಫಾನ್ ಖುರೇಷಿ ಅನ್ನುವ ಬಿಲ್ಡರ್, ಪಾಟೀಲ್ ಅವರಿಗೆ ಹೂಗುಚ್ಛ ನೀಡುತ್ತಿದ್ದ ದೃಶ್ಯ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ನಸೀಮ್ ಸಿದ್ದಿಕಿ ತಮ್ಮ ಮನೆಯಲ್ಲಿ ನಡೆಸಿದ್ದ ಈದ್ ಒವ್ತಣ ಕೂಟದಲ್ಲಿ ಈ ಮೂವರು ಕ್ರಿಮಿನಲ್ ಗಳನ್ನು ಪಾಟೀಲ್ ಭೇಟಿಯಾಗಿದ್ದಾರೆ.

ಈ ಮೂವರು ನನಗೆ ಯಾರೆಂದು ತಿಳಿಯದು, ಪೊಲೀಸರು ನನಗೆ ಏನು ಮಾಹಿತಿ ನೀಡಿಲ್ಲ. ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದರೆ ನಾನು ಈ ಕೂಟದಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಗೃಹಸಚಿವ ಪಾಟೀಲ್ ಸಮಜಾಯಿಷಿ ನೀಡಿದ್ದಾರೆ. ಆರ್ ಆರ್ ಪಾಟೀಲ್ ರ ಜೊತೆ ಭೂಗತ ಪಾತಕಿಗಳ ಭೇಟಿಯನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕೂಡಾ ಅಲ್ಲಗೆಳೆದಿದೆ.

ಗೃಹಸಚಿವರು ಈದ್ ಕೂಟಕ್ಕೆ ಬಂದಿದ್ದರು. ಅಂದು 200 -300 ಜನ ಸೇರಿದ್ದರು. ಪಾಟೀಲ್ ಅವರಿಗೆ ಈ ಮೂವರು ಯಾರೆಂದು ತಿಳಿಯದು. ಅಲ್ಲದೆ ಇರ್ಫಾನ್ ಖುರೇಷಿ ಮುಂಬೈ ನಗರದ ಪ್ರತಿಷ್ಠಿತ ಬಿಲ್ಡರ್ ಎಂದು ಅಲ್ಪ ಸಂಖ್ಯಾತರ ಆಯೋಗದ ಮುಖ್ಯಸ್ಥ ನಸೀಮ್ ಸಿದ್ದಿಕ್ಕಿ ವಾದಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X