ಕರವೇ ಪತ್ರಿಕೆಯಿಂದ ರಾಜ್ಯೋತ್ಸವ ಕಥಾ ಸ್ಪರ್ಧೆ

ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದ ಕಥೆಗಳನ್ನು : ಸಂಪಾದಕರು, ನಲ್ನುಡಿ ಕಥಾಸ್ಪರ್ಧೆ 2010, ಕರವೇ 'ನಲ್ನುಡಿ' ಮಾಸಪತ್ರಿಕೆ, ಕನಸು ಕ್ರಿಯೇಷನ್ಸ್, ನಂ.6/2, ಶಿವಾನಂದ ವೃತ್ತ, ಕುಮಾರಕೃಪ ರಸ್ತೆ, ಬೆಂಗಳೂರು 560 001 ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಈ-ಮೇಲ್ ಮೂಲಕ ಕಥೆಗಳನ್ನು ಕಳುಹಿಸಿದರೂ ಆದೀತು. ಈ-ಮೇಲ್ ವಿಳಾಸ: [email protected] ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕಥೆಗಳನ್ನು ಕಳುಹಿಸಲು ಕಡೆಯ ದಿನಾಂಕ ಅಕ್ಟೋಬರ್ 20.
ಪ್ರಥಮ ಬಹುಮಾನ 25,000 ರು., ದ್ವಿತೀಯ ಬಹುಮಾನ 15,000 ರು., ತೃತೀಯ ಬಹುಮಾನ 10,000 ರು. ಕನ್ನಡದ ಶ್ರೇಷ್ಠ ವಿಮರ್ಶಕರ ತಂಡವೊಂದು ಕಥಾಸ್ಪರ್ಧೆಯ ತೀರ್ಪು ನೀಡಲಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಮೆಚ್ಚುಗೆ ಪಡೆದ ಕಥೆಗಳನ್ನು 'ನಲ್ನುಡಿ ಮಾಸಿಕ'ದಲ್ಲಿ ಪ್ರಕಟಿಸಲಾಗುವುದು ಎಂದು ಕಾರ್ಯನಿರ್ವಾಹಕ ಸಂಪಾದಕ ಜ್ಞಾನೇಂದ್ರ ಕುಮಾರ್ ಪ.ಬ. ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ : 080-2234 1792.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ












Click it and Unblock the Notifications