ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾಗೆ 20ರೂ ಊಟದ ವರಸೆ

By Mrutyunjaya Kalmat
|
Google Oneindia Kannada News

Minister Sureshkumar
ಮೈಸೂರು, ಸೆ. 27 : ಮೈಸೂರು ದಸರಾ ಉತ್ಸವ ಸಮಯದಲ್ಲಿ ಊಟ, ತಿಂಡಿ, ವಸತಿಯ ಬೆಲೆಗಳು ಗಗನಕ್ಕೇರುತ್ತವೆ ಎನ್ನುವುದು ಅನೇಕ ಪ್ರವಾಸಿಗರ ದೂರು. ಈ ಸಮಸ್ಯೆಯನ್ನು ನೀಗಿಸಲು ಕಾನೂನು ಸಚಿವ ಮತ್ತು ಮೈಸೂರು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಪರಿಹಾರವೊಂದನ್ನು ಕಂಡುಹಿಡಿದಿದ್ದಾರೆ. ಅದರಂತೆ, ಜಗದ್ವಿಖ್ಯಾತ ಮೈಸೂರು ದಸರದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಈ ಬಾರಿ ಕೇವಲ 20 ರುಪಾಯಿಗೆ ಮೈಸೂರು ಥಾಲಿ ಊಟ ನೀಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.

ದಸರಾ ಸಂದರ್ಭದಲ್ಲಿ ಪ್ರವಾಸಿಗರ ಒತ್ತಡ ಹೆಚ್ಚಿರುವುದರಿಂದ ಹೋಟೆಲ್ ಗಳಲ್ಲಿ ಊಟೋಪಚಾರ ಸಹಜವಾಗಿಯೇ ದುಬಾರಿ ಎಂಬ ಕಳವಳ ಇತ್ತು. ಇದೆಲ್ಲವನ್ನೂ ಆಲೋಚಿಸಿ ಸಚಿವ ಸುರೇಶಕುಮಾರ್ ಮೈಸೂರು ಥಾಲಿ ಹೆಸರಿನಲ್ಲಿ ಪ್ರವಾಸಿಗರಿಗೆ ಊಟ ಕೊಡುವಂತೆ ಹೋಟೆಲ್ ಮಾಲೀಕರಲ್ಲಿ ವಿನಂತಿ ಮಾಡಿದ್ದರು. ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ದಸರಾ ಸಂದರ್ಭಕ್ಕೆ ಮಾತ್ರ ಕಡಿಮೆ ದರದಲ್ಲಿ ಗುಣಮಟ್ಟದ ಊಟ ನೀಡುವಂತೆ ಕೋರಿಕೊಂಡಿದ್ದರು.

ಈ ಕೋರಿಕೆಗೆ ಸ್ಪಂದಿಸಿರುವ ಹೋಟೆಲ್ ಮಾಲೀಕರ ಸಂಘ, ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಕೇವಲ 20 ರುಪಾಯಿಗೆ ಮೈಸೂರು ಥಾಲಿ ಹೆಸರಿನ ಊಟ ನೀಡುವುದಾಗಿ ಹೇಳಿದೆ. ಅನ್ನದೊಂದಿಗೆ ಒಂದು ಚಪಾತಿ, ಪಲ್ಯ ಮತ್ತು ಮಜ್ಜಿಗೆ ಥಾಲಿಯಲ್ಲಿರುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ತಿಳಿಸಿದ್ದಾರೆ.

ಮೈಸೂರು ಥಾಲಿ ಊಟ ನಗರದ ಆಯಕಟ್ಟಿನ ಪ್ರದೇಶದಲ್ಲಿರುವ 35-40 ಹೋಟೆಲ್ ಗಳಲ್ಲಿ ಮಧ್ಯಾಹ್ನದ ವೇಳೆ ದೊರಕಲಿದೆ. ಇವೆಲ್ಲವೂ ಮಧ್ಯಮ ವರ್ಗದ ಹೋಟೆಲೆಗಳು, ಇದರೊಂದಿಗೆ ಬೇರೆ ಬೇರೆ ಊಟಗಳೂ ಸಿಗಲಿದೆಯಾದರೂ ದಸರೆಗಾಗಿ ನಮ್ಮದೂ ಒಂದು ಕೊಡುಗೆ ಇರಲಿ ಎಂಬ ಕಾರಣಕ್ಕಾಗಿ ಹೋಟೆಲ್ ಮಾಲೀಕರು ಇದೇ ಮೊದಲ ಬಾರಿ ಔದಾರ್ಯ ತೋರಿ ವಿನೂತನ ಯೋಜನೆಗೆ ಸಹಕರಿಸಿದ್ದಾರೆ ಎಂದು ರಾಜೇಂದ್ರ ಹೇಳಿದ್ದಾರೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X