ವರುಣ್ ಮದುವೆಗೆ ದೊಡ್ಡಮ್ಮ ಸೋನಿಯಾ ಅತಿಥಿ

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮನೇಕಾ ಗಾಂಧಿ ಅವರು 30 ವರ್ಷದ ವರುಣ್ ಈ ವರ್ಷ ಬೆಂಗಾಳಿ ಯುವತಿ ಯಾಮಿನಿಯನ್ನು ವರಿಸುತ್ತಾನೆ. ವರ್ಷಾಂತ್ಯದಲ್ಲೇ ಮದುವೆ ಓಲಗ ಊದಿಸುವುದು ಗ್ಯಾರಂಟಿ ಎಂದು ಹರ್ಷದಿಂದ ನುಡಿದರು.
ಹಾಗೆಯೇ ತಮ್ಮ ಪುತ್ರನ ವಿವಾಹಕ್ಕೆ ಇಂದಿರಾಗಾಂಧಿ ಕುಟುಂಬದ ಎಲ್ಲರಿಗೂ ಆಹ್ವಾನ ನೀಡಲಾಗುತ್ತದೆ. ಸೋನಿಯಾ, ರಾಹುಲ್‌ಗಾಂಧಿಗೂ ವಿಶೇಷ ಆಹ್ವಾನ ನೀಡುತ್ತೇವೆ ಎಂದರು.
1997ರಲ್ಲಿ ನಡೆದ ಪ್ರಿಯಾಂಕಾ ಗಾಂಧಿ ಮದುವೆಯಲ್ಲಿ ವರುಣ್ ಪಾಲ್ಗೊಂಡಿದ್ದರು. ಆದರೆ, ಮನೇಕಾ ಮಾತ್ರ ಮದುವೆಯಿಂದ ದೂರ ಉಳಿದಿದ್ದರು. ಕೌಟುಂಬಿಕ ವೈಮನಸ್ಯದಿಂದಾಗಿ ಸೋನಿಯಾ, ವರುಣ್ ಕುಟುಂಬ ಕೆಲವು ವರ್ಷಗಳಿಂದ ಬಾಂಧವ್ಯ ಕಡಿದುಕೊಂಡಿದೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ












Click it and Unblock the Notifications