• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರಾ ಮಳೆಗೆ ಬೆಂಗಳೂರು ನಗರ ಜೀವನ ತತ್ತರ

By Rajendra
|
ಬೆಂಗಳೂರು, ಸೆ.25: ಶುಕ್ರವಾರ (ಸೆ.24) ರಾತ್ರಿ ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಕೇವಲ ಮೂರು ಗಂಟೆಯಲ್ಲಿ ಸರಾಸರಿ 10 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ ರಾತ್ರಿ 8.30ರ ವರದಿಯಂತೆ ನಗರದಲ್ಲಿ 106 ಮಿಲಿ ಮೀಟರ್‌ಗೂ ಅಧಿಕ ಮಳೆಯಾಗಿದೆ.

ಈ ವರ್ಷ ಮುಂಗಾರು ಶುರುವಾದ ಬಳಿಕ ಇದೇ ಮೊದಲ ಬಾರಿತೆ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. ಮಲ್ಲೇಶ್ವರ, ಬಸವನಗುಡಿ, ಹಲಸೂರು, ಲಾಲ್ ಬಾಗ್, ಎಂಜಿ ರಸ್ತೆಯ ರಸ್ತೆಗಳು ಭಾಗಶಃ ಕೆರೆಗಳಾಗಿದ್ದವು. ಮೋರಿಗಳು ನದಿಗಳಂತೆ ಭೋರ್ಗರೆದವು.

ಎಲ್ಲೆಲ್ಲಿ ಎಷ್ಟು ಪ್ರಮಾಣದ(ಮಿಲಿ ಮೀಟರ್‌ಗಳಲ್ಲಿ) ಮಳೆಯಾಗಿದೆ? ಅತ್ತಿ ಬೆಲೆ (34 ಮಿ.ಮೀ), ಸರ್ಜಾಪುರ (65 ),ಬಿದರಹಳ್ಳಿ (54.50), ಕೆ ಆರ್ ಪುರ (38.50), ವರ್ತೂರು (73 ), ಶಾಂತಿ ನಗರ (104), ಬಸವೇಶ್ವರನಗರ (51), ದಾಸನಪುರ (47.50), ಹೆಸರಘಟ್ಟ (127.50), ಜಾಲ (22), ಯಲಹಂಕ (38.50), ಯಶವಂತಪುರ (18.50), ಬೇಗೂರು (5), ಕೆಂಗೇರಿ(3) ಹಾಗೂ ಉತ್ತರಹಳ್ಳಿ (55).

ಮಳೆ ಸಮಸ್ಯೆಗಳಿಗಾಗಿ ಇಲ್ಲಿ ಸಂಪರ್ಕಿಸಿ: ಕೇಂದ್ರ ಕಚೇರಿ : 2222 1188, 2266 0000, 2210 0001. ಪೂರ್ವವಲಯ 2297 5803; ಪಶ್ಚಿಮ ವಲಯ 2356 1692; ದಕ್ಷಿಣ ವಲಯ 2656 6362; ದಾಸರಹಳ್ಳಿ 2297 5904; ಯಲಹಂಕ 2297 5936; ಬೊಮ್ಮನಹಳ್ಳಿ 2573 2447; ರಾಜರಾಜೇಶ್ವರಿನಗರ 2860 1851; ಮಹದೇವಪುರ 2851 2300.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more