ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಂಗದಲ್ಲೂ ಭ್ರಷ್ಟಚಾರ : ಘನತೆಗೆ ಧಕ್ಕೆ

By Mrutyunjaya Kalmat
|
Google Oneindia Kannada News

Supreme Court
ನವದೆಹಲಿ, ಸೆ. 24 : ನ್ಯಾಯಾಂಗದಲ್ಲೂ ಭ್ರಷ್ಟಾಚಾರದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಘನತೆಗೆ ಧಕ್ಕೆಯುಂಟಾಗುತ್ತಿರುವ ಬಗ್ಗೆ ಆತಂಕ ಸುಪ್ರಿಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಾಂಗದಲ್ಲಿ ಪ್ರಾಮಾಣಿಕ ವ್ಯಕ್ತಿಗಳ ನೇಮಕಕ್ಕೆ ಬೇಕಾಗುವ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದೆ.

ಜಮ್ಮು-ಕಾಶ್ಮೀರದ ಜಿಲ್ಲಾ ನ್ಯಾಯಾಧೀಶರ ವಜಾ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅರ್ಜಿದಾರರ ದೃಷ್ಟಿಯಲ್ಲಿ ನ್ಯಾಯಾಂಗದ ಮೇಲಿನ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೌರವಾನ್ವಿತ ಮತ್ತು ಪ್ರಾಮಾಣಿಕ ವ್ಯಕ್ತಿಗಳ ಅವಶ್ಯಕತೆಯಿದೆ. ಆದರೆ ನ್ಯಾಯಾಧೀಶರ ವೃತ್ತಿ ಧರ್ಮ ಮತ್ತು ಸಚ್ಚಾರಿತ್ರ ಹಾಗೂ ಸಮಗ್ರತೆಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ನ್ಯಾಯಮೂರ್ತಿ ಮುಕುಂದನ್ ಶರ್ಮಾ ಮತ್ತು ಅನಿಲ್ ಆರ್ ದವೆ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ವಿವಾದಿತ ನಿರ್ಣಯಗಳಲ್ಲಿ ಮತ್ತು ನ್ಯಾಯಾಲಯದ ವಿಷಯಗಳಲ್ಲಿ ನ್ಯಾಯಾಂಗದ ಮೇಲಿರುವ ಜನಾಭಿಪ್ರಾಯಗಳು ಸಮಾನವಾಗಿರುತ್ತವೆ. ನ್ಯಾಯಪೀಠಗಳಲ್ಲಿ ಕೆಲವು ನ್ಯಾಯಾಧೀಶರು ಪ್ರತ್ಯೇಕವಾಗುವುದರಿಂದ, ಅದು ಇಡೀ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ಸಂಬಂಧ ನ್ಯಾಯಾಧೀಶರು ಉನ್ನತ ಮಟ್ಟದ ಗೌರವ, ಉತ್ತಮ ಗುಣ ನಡತೆ ಮತ್ತು ಹೊಣೆಗಾರಿಕೆಯನ್ನು ಕಾಪಾಡಬೇಕಾಗುತ್ತದೆ ಎಂದು ನ್ಯಾಯಪೀಠವು ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X