ಅಶೋಕ್ ಕೈಗೆ ಹೋಮ್, ಶೋಭಾಗೆ ಇಂಧನ

ಯಡಿಯೂರಪ್ಪ ಅವರ ಪರಮಾಪ್ತ ಎನ್ನಲಾಗಿರುವ ವಿ ಸೋಮಣ್ಣ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ, ಈಶ್ವರಪ್ಪ ಅವರಿಂದ ತೆರವಾಗಿದ್ದ ಇಂಧನ ಖಾತೆಯನ್ನು ಶೋಭಾ ಕರಂದ್ಲಾಜೆ ಅವರಿಗೆ ನೀಡಲಾಗಿದೆ. ಗೃಹ ಖಾತೆಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದ ಡಾ. ವಿಎಸ್ ಆಚಾರ್ಯ ಅವರನ್ನು ಉನ್ನತ ಶಿಕ್ಷಣ ಖಾತೆಗೆ ವರ್ಗಾಯಿಸಲಾಗಿದೆ. ನೂತನ ಸಚಿವರು ಖಾತೆ ಮತ್ತು ಪ್ರಸ್ತುತ ಸಚಿವರ ಖಾತೆಗಳ ಬದಲಾವಣೆಯ ಪಟ್ಟಿ ಇಂತಿದೆ.
* ಶೋಭಾ ಕರಂದ್ಲಾಜೆ (ಯಶವಂತಪುರ) - ಇಂಧನ
* ಅನೇಕಲ್ ನಾರಾಯಣಸ್ವಾಮಿ (ಅನೇಕಲ್) - ಸಮಾಜ ಕಲ್ಯಾಣ ಇಲಾಖೆ
* ರಾಮದಾಸ್ (ಕೃಷ್ಣರಾಜ ಕ್ಷೇತ್ರ) - ವೈದ್ಯಕೀಯ ಶಿಕ್ಷಣ
* ಸಿಸಿ ಪಾಟೀಲ್ (ನರಗುಂದ) - ಮಹಿಳಾ ಮತ್ತು ಕಲ್ಯಾಣ ಖಾತೆ
* ವಿ ಸೋಮಣ್ಣ (ವಿಧಾನ ಪರಿಷತ್ ಸದಸ್ಯರು) - ಆಹಾರ ಮತ್ತು ನಾಗರಿಕ ಪೂರೈಕೆ
* ಸಿ ಎಚ್ ವಿಜಯಶಂಕರ್ (ವಿಧಾನ ಪರಿಷತ್ ಸದಸ್ಯರು) - ಅರಣ್ಯ ಇಲಾಖೆ
ಇತರ ಪ್ರಮುಖ ಬದಲಾವಣೆ
* ಆರ್ ಅಶೋಕ್ - ಸಾರಿಗೆ ಮತ್ತು ಗೃಹ ಇಲಾಖೆ
* ವಿ ಎಸ್ ಆಚಾರ್ಯ - ಉನ್ನತ ಶಿಕ್ಷಣ ಮತ್ತು ಯೋಜನಾ ಖಾತೆ
* ಡಿ ಸುಧಾಕರ್ - ಯುವಜನ ಸೇವೆ ಮತ್ತು ಬಂಧಿಖಾನೆ












Click it and Unblock the Notifications