ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ಚಟಕ್ಕೆ ದಾಸರಾದ ಬೆಂಗ್ಳೂರ್ ಯುವಕರು

By Mahesh
|
Google Oneindia Kannada News

Drug addict Bangaloreans
ಬೆಂಗಳೂರು, ಸೆ.21: ನಗರದಲ್ಲಿ ದುಶ್ಚಟಕ್ಕೆ ದಾಸರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಮಾದಕ ದ್ರವ್ಯ, ಆಲ್ಕೋಹಾಲ್ ಚಟ ಹದಿಹರೆಯದ ಯುವಕರನ್ನು ಆವರಿಸಿ ಕೊಲ್ಲುತ್ತಿರುವುದು ಆತಂಕಕಾರಿಯಾಗಿದೆ ಎಂದು ನಿಮ್ಹಾಸ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.

ನಿಮ್ಹಾಸ್ ನಲ್ಲಿ ದಾಖಲಾಗಿರುವ 2,800 ರೋಗಿಗಳಲ್ಲಿ ಶೇ.65 ರಷ್ಟು ಜನ ಆಲ್ಕೋಹಾಲ್ ದಾಸರಾಗಿದ್ದು, ಶೇ.20 ರಷ್ಟು ಜನ ಇಂಜೆಕ್ಷನ್ ಮೂಲಕ ಮಾದಕ ದ್ರವ್ಯ ಸೇವಿಸುವವರಗಿದ್ದಾರೆ. ಶೇ.15 ರಷ್ಟು ಜನ ಪೆಟ್ರೋಲಿಯಂ ದ್ರವ್ಯಗಳು, ಥಿನ್ನರ್ ಗಳು ಇನ್ನಿತರೆ ಪದಾರ್ಥಗಳನ್ನು ಸೇವಿಸಿ ಉನ್ಮತ್ತರಾಗುತ್ತಿದ್ದಾರೆ.

ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟು ಎದುರಿಸುವಾಗಲೂ ಆಲ್ಕೋಹಾಲ್ ಮಾರಾಟದಲ್ಲಿ ಏರಿಕೆ ಕಂಡಿತ್ತು. ಆಲ್ಕೋಹಾಲ್ ಹಾಗೂ ತಂಬಾಕು ದ್ರವ್ಯಗಳು ಯುವ ಪೀಳಿಗೆಗೆ ಅತಿದೊಡ್ಡ ಮಾರಕ ಡ್ರಗ್ಸ್ ಗಳಾಗಿವೆ ಎಂದು ಮನಶಾಸ್ತ್ರಜ್ಞ ವಿವೇಕ್ ಬೆನೆಗಲ್ ಅಭಿಪ್ರಾಯ ಪಟ್ಟಿದ್ದಾರೆ.

ಆಟೋ ಡ್ರೈವರ್ ಗಳ ಸಂಖ್ಯೆ ಅಧಿಕ:
ಮದ್ಯವ್ಯಸನಿಗಳ ಪುನರ್ ವಸತಿ ಕೇಂದ್ರದ ತಜ್ಞ ಡಾ. ಮಂಜುನಾಥ್ ಅವರ ಪ್ರಕಾರ' ಮದ್ಯ ವ್ಯಸನಿಗಳಲ್ಲಿ ಶೇ. 60 ರಷ್ಟು ಮಂದಿ ಆಟೋ ಡ್ರೈವರ್ ಗಳು ಎನ್ನುವುದು ದುರಂತದ ಸಂಗತಿ. ಆದರೆ, ಅಚ್ಚರಿಯ ಅಂಶವೆಂದರೆ, ಇವರ ನಂತರದ ಸ್ಥಾನದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳು, ವಿದ್ಯಾರ್ಥಿಗಳು ಹಾಗೂ ಡಾಕ್ಟರ್ ಗಳು ಸೇರಿದ್ದಾರೆ. ಆರ್ಥೋಪೆಡಿಕ್ ಸರ್ಜನ್ ಗಳು ಮಾದಕ ವ್ಯಸನಿಗಳಾಗಿರುವುದರ ಜೊತೆಗೆ ನಿಷೇಧಿತ ಡ್ರಗ್ಸ್ ಸರಬರಾಜಿನಲ್ಲೂ ತೊಡಗಿರುವ ಪ್ರಕರಣಗಳು ಭಯ ಹುಟ್ಟಿಸುತ್ತದೆ ಎಂದಿದ್ದಾರೆ.

ಆಲ್ಕೋಹಾಲ್ ಸೇವಿಸುವವರಲ್ಲಿ ಅಪ್ರಾಪ್ತ ಬಾಲಕರ ಸಂಖ್ಯೆ ಹೆಚ್ಚುತ್ತಿದ್ದು, ಮುಂದೆ ಮದ್ಯವ್ಯಸನಿಗಳಾಗಿ ಪರಿವರ್ತನೆಗೊಳ್ಳುವ ಲಕ್ಷಣಗಳು ಕಂಡುಬಂದಿವೆ. ಇಂತಹ ಬಾಲಕರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಪ್ರಾಣಕ್ಕೆ ಕುತ್ತಾಗುತ್ತದೆ ಎಂದು ಡಾ. ಬೆನೆಗಲ್ ಎಚ್ಚರದ ಮಾತುಗಳನ್ನಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X