ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ರಂಗಕರ್ಮಿ ಆರ್ ನಾಗೇಶ್ ಅಸ್ತಂಗತ

By Mahesh
|
Google Oneindia Kannada News

R Nagesh Passes Away
ಬೆಂಗಳೂರು, ಸೆ.19: ಕನ್ನಡ ಹವ್ಯಾಸಿ ರಂಗಭೂಮಿಯ ಖ್ಯಾತ ನಿರ್ದೇಶಕ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ನಾಗೇಶ್ (65) ಅವರು ಹೃದಯಾಘಾತದಿಂದಾಗಿ ಶನಿವಾರ ರಾತ್ರಿ ಜೆ.ಪಿ.ನಗರದ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕಲಾಭಿಮಾನಿಗಳ ದರ್ಶನಕ್ಕಾಗಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಅವರ ಪಾರ್ಥೀವ ಶರೀರವನ್ನು ಇಡಲಾಗಿದೆ. ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ನಡೆಯಲಿದೆ ಎಂದು ನಾಗೇಶ್ ಅವರ ಸಹೋದರ ಪ್ರಕಾಶ್ ಅರಸ್ ಅವರು ತಿಳಿಸಿದರು.

ದಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಕೃಷ್ಣೇಗೌಡರ ಆನೆ ನಾಟಕವನ್ನು ನಾಗೇಶ್ ನಿರ್ದೇಶಿಸಿದ್ದರು ಹಾಗೂ ಶನಿವಾರ 'ಕೃಷ್ಣೇಗೌಡರ ಆನೆ' ನಾಟಕದ 100ನೇ ಪ್ರದರ್ಶನ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುತ್ತಿತ್ತು. ಅನಾರೋಗ್ಯದ ಕಾರಣ ನಾಟಕ ಪ್ರದರ್ಶನಕ್ಕೆ ಗೈ ಹಾಜರಾದ ನಾಗೇಶ್ ಅವರು ಆತ್ತ ನಾಟಕ ನಡೆಯುತ್ತಿದ್ದರೆ ಇತ್ತ ಇಹಲೋಕ ತ್ಯಜಿಸಿದ್ದರು ಎಂದು ಅವರ ಸೋದರ ಪ್ರಕಾಶ್ ಹೇಳಿದರು.

ನಟ, ನಿರ್ದೇಶಕ, ಸಂಘಟಕ : ತಬರನ ಕಥೆ, ಯಯಾತಿ, ತಾಮ್ರ ಪತ್ರ, ಹರಕೆಯ ಕುರಿ ಸೇರಿದಂತೆ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದ ನಾಗೇಶ್ ಅವರು ತಬರನ ಕಥೆ ನಾಟಕದಲ್ಲಿ ನಟಿಸಿದ್ದರು. ಸ್ಫೋಟ, ಭುಜಂಗಯ್ಯನ ದಶಾವತಾರ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು.

ವಾರ್ತಾ ಇಲಾಖೆಯಲ್ಲಿ ಕಲಾ ವಿಭಾಗದ ಮುಖ್ಯಸ್ಥರಾಗಿ ಹಾಗೂ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದರು. ರಂಗ ಸಂಪದ, ಸೂತ್ರದಾರ ಸೇರಿದಂತೆ ಅನೇಕ ಕಲಾ ತಂಡಗಳನ್ನು ಕಟ್ಟಿ ಬೆಳೆಸಿದ್ದರು.ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X