ರಂಗಶಂಕರದಲ್ಲಿ ಬೆಪ್ಪುತಕ್ಕಡಿ ಭೋಳೆ ಶಂಕರ

ಯಲ್ಲಾಪುರದ ಮಂಚಿಕೇರಿಯ ಸಂಹತಿ ಟ್ರಸ್ಟ್ ರಂಗತಂಡ ಈ ನಾಟಕವನ್ನು ಪ್ರದರ್ಶಿಸುತ್ತಿದೆ. ಇದೇ ತಂಡದವರು ಕಂಬಾರರ ನಾಟಕವನ್ನು ಈಗಾಗಲೆ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಈಗ ಬೆಂಗಳೂರಿನ ನಾಟಕ ಪ್ರೇಮಿಗಳಿಗೆ ಮಂಚಿಕೇರಿಯ ತಂಡ ನಾಟಕ ನೋಡುವ ಅವಕಾಶ ಒದಗಿಬಂದಿದೆ.
ಎರಡೂ ದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶಿತವಾಗುತ್ತಿದೆ. ಟಿಕೆಟ್ ಗಳಿಗಾಗಿ ವೀಣಾ ಭಟ್ ಅವರನ್ನು 98456 95015 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಮಂಚಿಕೇರಿ ಬಗ್ಗೆ : ಯಲ್ಲಾಪುರ ತಾಲೂಕಿನ, ಮಂಚಿಕೇರಿ ನಾಟಕ ರಂಗದಲ್ಲಿ ರಾಜ್ಯದಲ್ಲಿಯೇ ಗುರುತಿಸಲ್ಪಟ್ಟ ಊರು. ಹೆಗ್ಗೋಡಿನ ನೀನಾಸಂ ತಿರುಗಾಟದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಟಕವನ್ನು ಪ್ರದರ್ಶಿಸುವ ಏಕೈಕ ಸ್ಥಳವೆಂದರೆ ಮಂಚಿಕೇರಿ. ಇಂತಹ ಪ್ರಖ್ಯಾತಿಯ ಮಂಚಿಕೇರಿಯ 'ಸಂಹತಿ ಟ್ರಸ್ಟ್' ತಂಡದ ನಾಟಕ ನೋಡಲು ಮರೆಯದಿರಿ.












Click it and Unblock the Notifications