ಬುದ್ಧಿವಂತ ಕ್ರಿಮಿನಲ್ ಎಕೆ ಸಿಂಗ್ ಶೂಟೌಟ್

ಪೀಣ್ಯದ ಪಟೇಲಪ್ಪ ನಗರದ ನಿವಾಸಿಯಾಗಿದ್ದ ಎಕೆ ಸಿಂಗ್ ಉತ್ತರ ಪ್ರದೇಶ ಮೂಲದವನು. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಂಬತ್ತು ಅಡಿರಸ್ತೆಯಲ್ಲಿನ ಮೆಡಿಕಲ್ ಶಾಪ್ ಬಳಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ.ಆತನನ್ನು ಬಂಧಿಸಿದ ಪೊಲೀಸರು ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ ಇಲ್ಲಿನ ಕೆಜಿ ಹಳ್ಳಿ ಸಮೀಪ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ.
ಗುರುವಾರ ಮಧ್ಯಾಹ್ನ ಇಲ್ಲಿನ ಹೆಣ್ಣೂರು-ಬಾಗಲೂರು ರಸ್ತೆಯಲ್ಲಿನ ಹೂವಿನನಾಯಕನ ಹಳ್ಳಿ ಕ್ರಾಸ್ ಸಮೀಪದಲ್ಲಿ ಅಡಗಿಕೊಂಡಿದ್ದ. ಈ ಸಂದರ್ಭದಲ್ಲಿ ಸಿಂಗ್‌ನನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ.
ಈ ವೇಳೆ ಪ್ರೇಜರ್‌ಟೌನ್ ಠಾಣಾ ಇನ್ಸ್‌ಪೆಕ್ಟರ್ ಗಿರೀಶ್ ರಕ್ಷಣೆಗಾಗಿ ಗುಂಡು ಹಾರಿಸಿದ್ದು, ಆರೋಪಿ ಸಿಂಗ್ ತಲೆಗೆ ಗುಂಡು ತಗುಲಿದೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಿಂಗ್ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ಯಲ್ಲಿರುವ ಆಸಾಮಿಯಾಗಿದ್ದು, ಕಳವು, ದರೋಡೆ, ಕೊಲೆಯತ್ನ ಸೇರಿದಂತೆ ಈತನ ವಿರುದ್ಧ ಒಟ್ಟು 29ಕ್ಕೂ ಹೆಚ್ಚು ಮೊಕದ್ದಮೆಗಳು ದಾಖಲಾಗಿವೆ .
ಬುದ್ಧಿವಂತ ರೌಡಿ: ಎಸ್ ಎಸ್ ಎಲ್ ಸಿ ಯಲ್ಲಿ ಶೇ. 87 ಅಂಕ, ಪಿಯುಸಿಯಲ್ಲಿ ಶೇ. 73 ಅಂಕ, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಮೂಲಕ ಎಂಬಿಎ ಮಾಡುತ್ತಿದ್ದಾಗ ಭೂಗತ ಲೋಕದ ನಂಟು ಆರಂಭವಾಯಿತು. ಬಿಹಾರದಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ ಮಾಡತೊಡಗಿದ. 2005 ರಲ್ಲಿ ಬಂಧಿತನಾದರೂ ಜಾಮೀನು ಪಡೆದು ಹೊರಬಿದ್ದಿದ್ದ. ಇತ್ತೀಚೆಗೆ ಈತನ ಗ್ಯಾಂಗ್ ನ ಪ್ರಮುಖರನ್ನು ಮುಂಬೈ ಪೊಲೀಸರು ಬಂಧಿಸಿ 34 ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು.












Click it and Unblock the Notifications