ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಯುವಕರ ನಗ್ನ ಮೆರವಣಿಗೆ ಸತ್ಯವೇ?

By Mahesh
|
Google Oneindia Kannada News

Kashmir Youth Paraded Naked
ನವದೆಹಲಿ, ಸೆ. 9: ಕಾಶ್ಮೀರದಲ್ಲಿ ಸಮವಸ್ತ್ರದಾರಿ ಸಿಬ್ಬಂದಿ ನಾಲ್ವರು ಯುವಕರನ್ನು ನಗ್ನ ಮೆರವಣಿಗೆ ನಡೆಸಿದರೆನ್ನಲಾದ ಮೂರು ನಿಮಿಷದ ವೀಡಿಯೊ ತುಣುಕೊಂದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆದೇಶಿಸಲಾಗಿದೆ ಎಂದು ಜಮ್ಮುಕಾಶ್ಮೀರ ಪೊಲೀಸರು ಹೇಳಿದ್ದಾರೆ.

ಸಾಮಾಜಿಕ ಅಂತರ್ಜಾಲ ತಾಣಗಳಾದ ಫೇಸ್‌ಬುಕ್ ಮತ್ತು ಯೂ ಟ್ಯೂಬ್‌ಗಳಲ್ಲಿ ಅನಾಮಧೇಯವಾಗಿ ಮೂರು ನಿಮಿಷಗಳ ಈ ವೀಡಿಯೊ ತುಣುಕನ್ನು ಪ್ರಸಾರಿಸಲಾಗುತ್ತಿದೆ. ಶ್ರೀನಗರದಲ್ಲಿ ಈ ವೀಡಿಯೊ ತುಣುಕು ವ್ಯಾಪಕ ಪ್ರಸಾರದಲ್ಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

ಅದು ಹಳೆಯ ವೀಡಿಯೊ ತುಣುಕಿನಂತೆ ಕಾಣಿಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ''ಇಲ್ಲಿಯವರೆಗೆ ಆ ವೀಡಿಯೊ ತುಣುಕಿನ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಲಾಗಿಲ್ಲ"" ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ. ಈ ವೀಡಿಯೊ ಚಿತ್ರಣದ ಬಗ್ಗೆ ಯಾರಾದರೂ ಮಾತನಾಡಿದ್ದಾರೆಯೇ ಎಂದು ಪರಿಶೀಲಿಸಲು ಭದ್ರತಾ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

'ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ವೀಡಿಯೊದಲ್ಲಿರುವ ವ್ಯಕ್ತಿಗಳನ್ನು ಗುರುತಿಸದೆ, ಅಂತಹ ವೀಡಿಯೊಗಳನ್ನು ನಂಬುವುದು ಉತ್ತಮವಲ್ಲ ಎಂಬುದು ನನ್ನ ನಂಬಿಕೆ'" ಎಂದು ಚಿದಂಬರಂ ತಿಳಿಸಿದ್ದಾರೆ. ಈ ವೀಡಿಯೊ ಚಿತ್ರಣವನ್ನು ಪ್ರಸಾರ ಮಾಡಿರುವುದಕ್ಕೆ ಎರಡು ಸಾಮಾಜಿಕ ಅಂತರ್ಜಾಲ ತಾಣಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಶ್ರೀನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

''ಯೂ ಟ್ಯೂಬ್ ಮತ್ತು ಫೇಸ್‌ಬುಕ್‌ನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಈ ಆಧಾರ ರಹಿತ ಮತ್ತು ದುರುದ್ದೇಶಪೂರಿತ ವೀಡಿಯೊವನ್ನು ಅಂತರ್ಜಾಲ ತಾಣಕ್ಕೆ ರವಾನೆ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ"" ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಅದನ್ನು ಪ್ರಸಾರ ನಡೆಸುತ್ತಿರುವ ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ? :
ಗಂಡಸಿನ ಹಿನ್ನೆಲೆ ಧ್ವನಿಯೊಂದು ಮೂರ್ನಾಲ್ಕು ಯುವಕರಿಗೆ ಬಟ್ಟೆ ಬರೆ ಕಳಚಿ ಮೆರವಣಿಗೆ ಹೊರಡಲು ಸೂಚಿಸುತ್ತದೆ. ಮತ್ತೊಬ್ಬನ ಧ್ವನಿ ಇದನ್ನು ವಿಡಿಯೋ ಚಿತ್ರೀಕರಿಸಲು ಹೇಳುತ್ತದೆ. ಫೇಸ್ ಬುಕ್ ನ 'ಸಿಟಿಜನ್ಸ್ ಆಫ್ ಕಾಶ್ಮೀರ್' ಗ್ರೂಪ್ ಹಾಗೂ ಯೂಟ್ಯೂಬ್ ನಲ್ಲಿ 'ಕಾಶ್ಮೀರ್ ಅಬು ಘರೀಬ್' ಎಂಬ ಹೆಸರಿನಲ್ಲಿ ಪ್ರಕಟಗೊಂಡಿದೆ. ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೇಗಿರುತ್ತೆ ಎಂದು ತೋರಿಸಲು ಈ ವಿಡಿಯೋ ನೋಡಿ ಎಂದು ಕಾಮೆಂಟ್ ಕೂಡಾ ಮಾಡಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X