ಲೈಂಗಿಕ ಕಿರುಕುಳ ಆರೋಪ ಅಲ್ಲಗೆಳೆದ ಸುಬ್ರಮಣ್ಯಂ
ಬೆಂಗಳೂರು,
ಸೆ.8: ವಿಶ್ವವಿಖ್ಯಾತ ಪೀಟಿಲು ವಾದಕ ಡಾ.ಎಲ್. ಸುಬ್ರಮಣ್ಯಂ ಅವರ ಮೇಲೆ ದಾಖಲಾಗಿರುವ ಲೈಂಗಿಕ ಕಿರುಕುಳ ಆರೋಪ ಹಾಗೂ ಅವರ ಮನೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣದ ತನಿಖೆಯನ್ನು ಸಂಜಯನಗರ ಪೊಲೀಸರು ಚುರುಕುಗೊಳಿಸಿದ್ದಾರೆ. id="toptextpromo">ಸುಬ್ರಮಣ್ಯಂ
ಅವರ ವಿರುದ್ಧ ಮನೆ ಕೆಲಸದ ಭಾಗ್ಯ ಎಂಬಾಕೆ ಸಂಸ್ಥೆಯೊಂದರ ಲೆಟರ್ ಹೆಡ್‌ನಲ್ಲಿ ಲೈಂಗಿಕ ಕಿರುಕುಳದ ದೂರಿನ ಪ್ರತಿಯನ್ನು ಸಂಜಯನಗರ ಪೊಲೀಸರಿಗೆ ನೀಡಿದ್ದಾಳೆ. ತಮ್ಮ ಮನೆಯಲ್ಲಿ ನಾಲ್ಕು ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ.ಇದು ಕೆಲಸದಾಕೆಯ ಕೃತ್ಯ ಎಂದು ಸುಬ್ರಮಣ್ಯಂ ಮತ್ತು ಅವರ ಪತ್ನಿ ಖ್ಯಾತ ಹಿನ್ನಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಪ್ರತಿದೂರು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಸಂಬಂಧ ಕೆಲಸದಾಕೆ ಭಾಗ್ಯಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸಂಘಟನೆಯೊಂದರ ಲೇಟರ್ ಹೆಡ್ ಬಳಸಿ ಭಾಗ್ಯ ದೂರು ನೀಡಿದ್ದಾಳೆ. ಇದರ ಬದಲಿಗೆ ತಾನೇ ಲಿಖಿತವಾಗಿ ಪೊಲೀಸ್ ಠಾಣೆಗೆ ದೂರು ನೀಡಿದರೆ ಎಫ್ ಐಆರ್ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.











Click it and Unblock the Notifications