ಈ ವಿದ್ಯಾರ್ಥಿನಿಗೆ 27 ಬೆರಳುಗಳು!

Multiple Vestigial Fingers girl
ಬೆಂಗಳೂರು, ಸೆ. 4 : ಮನುಷ್ಯರಿಗೆ ಕೈಬೆರಳು ಮತ್ತು ಕಾಲು ಬೆರಳುಗಳು ಎಷ್ಟಿರುತ್ತವೆ. 20 ಎಂದು ತಟ್ಟಂತ ಹೇಳಬಹುದು. ಆದರೆ, ಇಲ್ಲೊಬ್ಬಳು ನತದೃಷ್ಟ ಹುಡುಗಿಯೊಬ್ಬಳಿಗೆ 27 ಬೆರಳುಗಳು ಇವೆ. ಅಷ್ಟ ಅಲ್ಲ ಇದರಿಂದ ಆಕೆ ಅನುಭವಿಸುತ್ತಿರುವ ನೋವು ಹೇಳತೀರದಾಗಿದೆ.

ನಗರದ ರಾಜಾನುಕುಂಟೆ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವರಲಕ್ಷ್ಮಿ 27 ಬೆರಳುಗಳನ್ನು ಹೊಂದಿರುವ ಹುಡುಗಿ. ವರಲಕ್ಷ್ಮಿ ತಾಯಿ ಪಾರ್ವತಮ್ಮ ದಿನಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವವರು. ಮಗಳ ಈ ವಿಚಿತ್ರ ಅಂಗವೈಕಲ್ಯಕ್ಕೆ ದಿಕ್ಕು ಕಾಣದಂತಾಗಿದ್ದಾರೆ. ರಾಜಾನುಕುಂಟೆ ಪ್ರೌಢ ಶಾಲೆ ಶಿಕ್ಷಕರು ವರಲಕ್ಷ್ಮಿ ಈ ವಿಚಿತ್ರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ನಗರದ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವರಲಕ್ಷ್ಮಿ ಅನುಭವಿಸುತ್ತಿರುವ ವಿಚಿತ್ರ ಸಮಸ್ಯೆಗೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ವರಲಕ್ಷ್ಮಿ ಉತ್ತಮ ವಿದ್ಯಾರ್ಥಿನಿ. ಈಕೆ ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರಕ್ಕಾಗಿ ನಾವು ರಾಮಯ್ಯ ಆಸ್ಪತ್ರೆಯ ವೈದ್ಯರನ್ನು ಕಂಡಿದ್ದೇವೆ. 27 ಬೆರಳುಗಳನ್ನು ಹೊಂದಿರುವ ಈಕೆಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು 60 ರಿಂದ 70 ಸಾವಿರ ರುಪಾಯಿ ಅವಶ್ಯಕತೆ ಇದೆ. ಆದರೆ, ಈಕೆಗೆ ತಾಯಿ ಮಾತ್ರ ಇರುವುದರಿಂದ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಕ ಕುಮಾರ ಹೇಳುತ್ತಾರೆ.

ಮನುಷ್ಯನಿಗೆ 10 ಕೈ ಬೆರಳು, 10 ಕಾಲು ಬೆರಳು ಇರುವುದು ಸಹ. ಆದರೆ, ವರಲಕ್ಷ್ಮಿ ವಿಷಯದಲ್ಲಿ ಬೇರೆ ತರನಾಗಿದೆ. 27 ಬೆರಳುಗಳನ್ನು ಹೊಂದಿರುವ ಆಕೆ ಹೆಬ್ಬೆರಳೆ ಇಲ್ಲ. ಇದರಿಂದ ಆಕೆ ಕೀಲು ನೋವು ಅನುಭವಿಸುತ್ತಿದ್ದಾಳೆ. ಈ ವಿಚಿತ್ರ ಅಂಗವೈಕಲ್ಯ ಆಕೆಯ ಬೆಳವಣಿಗೆಗೂ ತೊಡಕಾಗಿದೆ ಎನ್ನುತ್ತಾರೆ ರಾಮಯ್ಯ ಕಾಲೇಜಿನ ಎಲುಬು ಕೀಲು ತಕ್ಷ ಡಾ. ಸುಂದರೇಶನ್ ಅವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+