ಸಾಕ್ಷ್ಯಾಧಾರಗಳ ಕೊರತೆ ಎದುರಿಸುತ್ತಿರುವ ಶುಭಾ ಕೇಸ್

ಅಧೀನ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿದ್ದ ಶುಭಾರ ಅರ್ಜಿಯ ವಿಚಾರಣೆ ವೇಳೆ ಅವರ ಪರ ವಕೀಲರು ನ್ಯಾ.ಕೆ.ಶ್ರೀಧರರಾವ್ ಹಾಗೂ ನ್ಯಾ ಬಿ.ವಿ.ಪಿಂಟೋ ಅವರಿದ್ದ ವಿಭಾಗೀಯ ಪೀಠದ ಮುಂದೆ ಶುಭಾ ಪರ ವಕೀಲ ಸಿ ವಿ ನಾಗೇಶ್ ಸಮರ್ಥಿಸಿಕೊಂಡರು. ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಸರಕಾರ ಎಡುವುತ್ತಿರುವುದು ಹಂತಕಿಗೆ ಶುಭಾಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ.
ಗಿರೀಶ್ ಕೊಲೆಗೆ ಸಂಚು ರೂಪಿಸಿದ ಮೊದಲನೇ ಆರೋಪಿ ಅರುಣ್ ವರ್ಮಾ, ಶಾಕ್ ಅಬ್ಸರ್ಬರ್ ನಿಂದ ಹೊಡೆದು ಕೊಲೆ ಮಾಡಿದ ವೆಂಕಟೇಶ್, ಸಹಾಯ ಮಾಡಿದ ಅರುಣ್ ವರ್ಮಾನ ಸಂಬಂಧಿ ದಿನೇಶ್ ಹಾಗೂ ಕೊಲೆಯ ಸೂತ್ರಧಾರಿ ಶುಭಾಗೆ ಐಪಿಸಿ ಸೆಕ್ಷನ್ 302, 120ರಡಿ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಶುಭಾಗೆ ಹೆಚ್ಚುವರಿಯಾಗಿ ಮೂರು ವರ್ಷ ಸಾದಾ ಶಿಕ್ಷೆಯನ್ನು ನಗರದ 17ನೇ ತ್ವರಿತ ನ್ಯಾಯಾಲಯ ವಿಧಿಸಿತ್ತು. ಜೊತೆಗೆ 50 ಸಾವಿರ ರುಪಾಯಿ ದಂಡವನ್ನು ವಿಧಿಸಿತ್ತು.
ಶುಭಾ ಆರೋಪಿಯೂ ಅಲ್ಲ. ಅಪರಾಧಿಯೂ ಅಲ್ಲ. ಅವರ ನಡತೆ ಕುರಿತು ಒಂದಿಷ್ಟು ಕಪ್ಪುಚುಕ್ಕೆ ಇಲ್ಲ. ಆಕೆ ಸಂಪೂರ್ಣ ಮುಗ್ಧೆ ಮತ್ತು ನಿರಪರಾಧಿ ಇಂತವರು ಹತ್ಯೆಗೈಯ್ಯಲು ಹೇಗೆ ಸಾಧ್ಯ? ಶುಭಾಳನ್ನು ಈ ಪ್ರಕರಣದಲ್ಲಿ ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ ಎಂದು ಅವರ ವಕೀಲ ಸಿ ವಿ ನಾಗೇಶ್ ವಾದಿಸಿದರು.












Click it and Unblock the Notifications