ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ಕೋಟಿ ರು. ಭೂಕಬಳಿಕೆ ಹಗರಣ ಬಯಲು

By Mrutyunjaya Kalmat
|
Google Oneindia Kannada News

Crimebeat
ಬೆಂಗಳೂರು, ಸೆ. 2 : ನಕಲಿ ಗೃಹ ನಿರ್ಮಾಣ ಸಂಸ್ಥೆ ಸ್ಥಾಪಿಸಿ ನಗರದ ಕೇಂದ್ರ ಭಾಗದಲ್ಲಿರುವ ಒಂದು ಸಾವಿರ ಕೋಟಿ ರುಪಾಯಿ ಮೌಲ್ಯದ ಭೂಮಿ ಕಬಳಿಸಲು ಖಾಸಗಿ ಸಂಸ್ಥೆಯೊಂದು ನಡೆಸಿದ ಹುನ್ನಾರವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದು 6 ಮಂದಿಯನ್ನು ಬಂಧಿಸಿದ್ದಾರೆ.

ವಿವೇಕನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಕೋರಮಂಗಲದ ಶಾಂತಿನಗರದ ಗೃಹ ನಿರ್ಮಾಣ ಸಹಕಾರ ಸಂಘವನ್ನು ಅದೇ ಹೆಸರಿನಲ್ಲಿ ನಕಲು ಮಾಡಿ ಬೇರೆ ಸದಸ್ಯರನ್ನು ಸೃಷ್ಟಿಸಿ ಸುಮಾರು 66.22 ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಹಗರಣದ ಪ್ರಮುಖ ರೂವಾರಿ ಆಂಧ್ರ ಮೂಲದ ಲಾರೆನ್ಸ್ ಪ್ರೊಜೆಕ್ಟ್ ಸಂಸ್ಥೆ ಮುಖ್ಯಸ್ಥ ಜಿ ಪಿ ರೆಡ್ಡಿ (50), ಆಡುಗೋಡಿ ಲಕ್ಷ್ಮಣ್, ಶಶಿಕುಮಾರ್ ಶ್ರೀಕಂಠ, ತ್ಯಾಗರಾಜ ಹಾಗೂ ಚಂದ್ರಶೇಖರ್ ಎಂಬುವವರನ್ನು ಬಂಧಿಸಲಾಗಿದೆ.

ಈ ಹಗರಣದಲ್ಲಿ ಪ್ರಭಾವಿಗಳು ಹೆಸರು ತಳುಕು ಹಾಕಿಕೊಂಡಿದೆ. 1986ರಲ್ಲಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದ್ದರೂ 2004ರವರೆಗೆ ನಿವೇಶನ ಹಂಚಿಕೆ ಮಾಡದ ಮೂಲ ಸಂಸ್ಥೆ ವಿರುದ್ಧವೂ ಅನುಮಾನವಿದೆ. ಹೀಗಾಗಿ ನಗರದ ಹೃದಯ ಭಾಗದಲ್ಲಿರುವ ಈ ಜಾಗವನ್ನು ಸೂಕ್ತ ಪ್ರಾಧಿಕಾರದ ಮೂಲಕ ಸರಕಾರದ ವಶಕ್ಕೆ ತೆಗೆದುಕೊಳ್ಳುವುದು ಸೂಕ್ತ ಎಂದು ಪೊಲೀಸ್ ಆಯುಕ್ತ ಶಂಕರ ಬಿದರಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X