ರಾಜ್ಯದಲ್ಲಿ ಅನಿಲ್ ಮುಖೇಶ್ ಮತ್ತೆ ಕಾದಾಟ

ಈ ಘಟಕದ ಹೂಡಿಕೆ 7,500 ಕೋಟಿ ರೂಪಾಯಿಗಳಾಗಬಹುದೆಂದು ಅಂದಾಜಿಸಿದ್ದು, ಇದಕ್ಕೆ ಮುಖೇಶ್ ರ ರಿಲಯನ್ಸ್ ಇಂಡಸ್ಟ್ರೀಸ್ ಬಿಡ್ ಮಾಡಲಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್(KPCL) 2007ರಲ್ಲಿ ತಲಾ 660 ಮೆಗಾ ವ್ಯಾಟ್‌ಗಳ ಎರಡು ಘಟಕಗಳನ್ನು ಸ್ಥಾಪಿಸಲು ಬಿಡ್ ಗಳನ್ನು ಆಹ್ವಾನಿಸಿತ್ತು.
ಈ ಬಿಡ್ ಗೆ 14 ಕಂಪೆನಿಗಳು ಬಿಡ್ ಸಲ್ಲಿಸಿದ್ದು ಇದರಲ್ಲಿ 11 ಕಂಪೆನಿಗಳು ಅರ್ಹತೆ ಗಳಿಸಿದ್ದವು. ಆದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಈ ಬಿಡ್ ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಬಿಡ್ ಗಳನ್ನು ರದ್ದುಪಡಿಸಿ ಕಳೆದ ಜುಲೈನಲ್ಲಿ ಹೊಸದಾಗಿ ಬಿಡ್ ಆಹ್ವಾನಿಸಿತ್ತು. ಇದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ 12 ಕಂಪೆನಿಗಳು ಅರ್ಹತೆ ಪಡೆದಿವೆ.
ಇದರಲ್ಲಿ ಟಾಟಾ ಪವರ್, ಜಿ ಎಮ್ ಆರ್ ಎನರ್ಜಿ, ಜಿಂದಲ್ ಪವರ್, ಶ್ರೀ ಸಿಮೆಂಟ್, ಐಆರ್‌ಬಿ ಇನ್ಪ್ರಾಸ್ಟ್ರಕ್ಚರ್, ಸ್ಟರ್ ಲೈಟ್ ಎನರ್ಜಿ, ಆದಿತ್ಯ ಬಿರ್ಲಾ, ಎಸ್ಸೆಲ್ ಮೈನಿಂಗ್, ಜಿವಿಕೆ ಇಂಡಸ್ಟ್ರೀಸ್, ಏಇಎಸ್ (ಇಂಡಿಯಾ) ಅದಾನಿ ಪವರ್, ದಾಲ್ಮಿಯಾ ಪವರ್ ಮತ್ತು ವೀಡಿಯೋಕಾನ್ ಸೇರಿವೆ. ಕನಿಷ್ಠ ಬಿಡ್ ಸಲ್ಲಿಸಿದ ಕಂಪೆನಿಉನ್ನು ಮುಂದಿನ ಡಿಸೆಂಬರ್ ಒಳಗೆ ಆಯ್ಕೆ ಮಾಡಲಾಗುವುದು.
ಈ ಘಟಕಕ್ಕಾಗಿ ಸರ್ಕಾರ ಈಗಾಗಲೇ 1500 ಎಕರೆ ಭೂಮಿಯನ್ನೂ ಸ್ವಾಧೀನಪಡಿಸಿಕೊಂಡಿದ್ದು, 2 ಟಿಎಂಸಿ ನೀರನ್ನೂ ಒದಗಿಸಲಿದ್ದು ಇದು ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿದೆ. ಆಯ್ಕೆ ಮಾಡಿದ ಕಂಪೆನಿ ವಿದೇಶದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಬೇಕಿದೆ.











Click it and Unblock the Notifications