4ನೇ ಬಾರಿ ಸೋನಿಯಾ ಕೈ ಅಧಿನಾಯಕಿ?
ನವದೆಹಲಿ,
ಆ. 30 : ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷದ ಈ ಉನ್ನತ ಸ್ಥಾನಕ್ಕೆ ಪ್ರಜಾಪ್ರಭುತ್ವ ವಿಧಾನದಲ್ಲಿ ಚುನಾವಣೆ ನಡೆಯಬೇಕೆಂಬ ಆಭಿಲಾಷೆ ಕೆಲವರದು. ಆದರೆ, ಗಾಂಧಿ ಮನೆತನದ ವಿರುದ್ಧ ಸ್ಪರ್ಧಿಸುವ ಉತ್ಸಾಹವಾಗಲೀ, ಧೈರ್ಯವಾಗಲಿ ಯಾರಲ್ಲೂ ಕಂಡುಬರುತ್ತಿಲ್ಲ. id="toptextpromo">ಮೂರು
ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೋನಿಯಾ ಈ ಬಾರಿಯೂ ಅವಿರೋಧ ಆಯ್ಕೆಯಾಗುವ ಎಲ್ಲಾ ಲಕ್ಷಣಗಳೂ ಇವೆ. ಸೆಪ್ಟೆಂಬರ್ 2 ರಂದು ನಾಮಪತ್ರ ಸಲ್ಲಿಸುವ ಕೊನೆ ದಿನವಾಗಿದೆ. ಸೆ.10 ರಂದು ನಾಮಪತ್ರ ವಾಪಸಾತಿಗೆ ಕಡೆ ದಿನ ಎಂದು ಘೋಷಿಸಲಾಗಿದೆ. ಅಗತ್ಯಬಿದ್ದರೆ ಸೆ. 17ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ನ ರಾಜ್ಯ ಘಟಕಗಳು ಸೇರಿ 7946 ಮಂದಿ ಮತದಾನ ಹಕ್ಕು ಹೊಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸೋನಿಯಾ
ಗಾಂಧಿ ಅವರು ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ಇವರ ಪರವಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಸಂಸದೀಯ ಪಕ್ಷದ ನಾಯಕ ಪ್ರಣಬ್ ಮುಖರ್ಜಿ, ಸಂಸದ ರಾಹುಲ್ ಗಾಂಧಿ ಪ್ರಸ್ತಾಪನೆ ಸಲ್ಲಿಸಲಿದ್ದಾರೆ. ಸೋನಿಯಾ ಗಾಂಧಿ ಅವಿರೋಧ ಆಯ್ಕೆಯಾಗುವ ಕುರಿತು ಅಂದೇ ನಿರ್ಧಾರವಾಗಲಿದೆ. ಮೂರು ಸಲ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು, ಒಂದು ಸಲ ಮಾತ್ರ ಕಾಂಗ್ರೆಸ್ ಹಿರಿಯ ನಾಯಕ ಜೀತೆಂದ್ರ ಪ್ರಸಾದ್ ವಿರುದ್ಧ ಸ್ಪರ್ಧೆಗೆ ಇಳಿಯಬೇಕಾಗಿ ಬಂದಿತ್ತು.











Click it and Unblock the Notifications