ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ 70 ಪೈಸೆ ಏರಿಕೆ ಸಂಭವ

By Mahesh
|
Google Oneindia Kannada News

Private Oil companies set to hike petrol prices by up to 70 paise per litre
ನವದೆಹಲಿ, ಆ.30: ಸರ್ಕಾರ ಕಳೆದ ಜೂನ್ ನಲ್ಲಿ ತೈಲ ಬೆಲೆ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮುಂದಿನ ವಾರ ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 50 ಪೈಸೆಯಿಂದ 70 ಪೈಸೆಗಳ ವರೆಗೆ ಏರಿಕೆ ಮಾಡುವ ಸಂಭವವಿದೆ.

ಲಖ್ನೋದಲ್ಲಿ ಇಂದು ಬೆಲೆ ಏರಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯಸಚಿವ ಜಿತಿನ್ ಪ್ರಸಾದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದಬೆಲೆ ಏರಿಕೆ ಕಂಡರೆ ಇಲ್ಲಿನ ಕಂಪೆನಿಗಳು ಸಹಜವಾಗಿ ಬೆಲೆ ಏರಿಕೆ ಮಾಡಲಿವೆ. ಆದರೆ ಖಾಸಗಿ ಕಂಪೆನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಸ್ಥಾಪಿಸಲು ಸರ್ಕಾರ ಬಿಡುವುದಿಲ್ಲ ಎಂದರು.

ತೈಲ ಬೆಲೆ ನಿಯಂತ್ರಣ ರದ್ಧತಿಯ ನಂತರ ಪ್ರತೀ ಲೀಟರ್ ಪೆಟರೋಲಿಗೆ ರೂ 3.50 ದರ ಹೆಚ್ಚಳ ಆಗಿದ್ದು ಅಂತಾರಾಷ್ಟ್ರೀಯ ದರಗಳಿಗನುಗುಣವಾಗಿ ಬೆಲೆ ಏರಿಕೆ ಮಾಡಲು ಕಂಪೆನಿಗಳಿಗೆ ಸ್ವತಂತ್ರ ನೀಡಲಾಗಿದೆ. ಕಂಪೆನಿಗಳು ದರ ಪರಿಷ್ಕರಣೆ ಮಾಡಲು ಪಾರದರ್ಶಕ ಹಾಗೂ ಮಾರುಕಟ್ಟೆ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಅಂತಾರಾಷ್ಟ್ರೀಯ ತೈಲ ಬೆಲೆಗಳ 15 ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ ಪೆಟ್ರೋಲ್ ಬೆಲೆ ಲೀಟರಿಗೆ 50 ಪೈಸೆ ಹಾಗೂ 30 ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ 70 ಪೈಸೆ ದರ ಏರಿಕೆ ಮಾಡಬೇಕಾಗುತ್ತದೆ.

ಈಗಿನ ಲೋಕಸಭಾ ಅಧಿವೇಶನ ಆಗಸ್ಟ್ 31ಕ್ಕೆ ಮುಗಿಯಲಿದ್ದು ನಂತರ ಕಂಪೆನಿಗಳು ದರ ಏರಿಕೆ ಮಾಡಲಿವೆ. ಶೇ.90 ರಷ್ಟು ದೇಶದ ತೈಲ ಚಿಲ್ಲರೆ ಮಾರಾಟವನ್ನು ಸರ್ಕಾರೀ ಕಂಪೆನಿಗಳಾದ ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಳು ನಿಯಂತ್ರಿಸುತ್ತಿದ್ದು, ದರ ಏರಿಕೆಯಿಂದ ಖಾಸಗಿ ಕಂಪೆನಿಗಳಾದ ಎಸ್ಸಾರ್, ರಿಲಯನ್ಸ್ ಮತ್ತು ಶೆಲ್ ನ ವ್ಯಾಪಾರಕ್ಕೂ ತೊಂದರೆಯಾಗಲಿದೆ.

ಸರ್ಕಾರ ಡೀಸೆಲ್ ಮೇಲಿನ ಬೆಲೆ ನಿಯಂತ್ರಣವನ್ನು ತೆಗೆದು ಹಾಕುವಂತೆಯೂ ಕಂಪೆನಿಗಳು ಒತ್ತಾಯಿಸುತ್ತಿವೆ. ದೇಶದ ತೈಲ ಮಾರಾಟದಲ್ಲಿ ಡೀಸೆಲ್ ನ ಪಾಲು ಶೇ 40.3 ರಷ್ಟಿದೆ. ಪ್ರತೀ ಲೀಟರ್ ಡೀಸೆಲ್ ಮಾರಾಟದಿಂದ ಸರ್ಕಾರಿ ಕಂಪೆನಿಗಳು ಲೀಟರ್ ಡೀಸೆಲ್ ಗೆ ರೂ 2.50 ರಷ್ಟು ನಷ್ಟ ಅನುಭವಿಸುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X