ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ವೇಳೆಗೆ ಚಿನ್ನದ ಬೆಲೆ 20 ಸಾವಿರಕ್ಕೆ

By Mahesh
|
Google Oneindia Kannada News

Gold prices set to touch Rs 20,000 per 10 gram by Diwali
ಮುಂಬೈ,ಆ.30:ಮುಂಬರುವ ದೀಪಾವಳಿಗೆ ಮುನ್ನ ಚಿನ್ನ 10ಗ್ರಾಮ್‌ಗೆ 20 ಸಾವಿರ ರೂ.ಗಳಾಗಲಿವೆ ಎಂಬುದಾಗಿ ಸ್ವರ್ಣ ಮಾರುಕಟ್ಟೆ ಅಕಾರಿಗಳು ತಿಳಿಸಿದ್ದಾರೆ. ಹೂಡಿಕೆದಾರರು ಚಿನ್ನದತ್ತ ದೃಷ್ಟಿ ಹಾಯಿಸಿರುವ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯನ್ನು ಊಹಿಸಲಾಗಿದೆ.

ದೀಪಾವಳಿಯೊಳಗೆ 10ಗ್ರಾಂ ಚಿನ್ನದ ಬೆಲೆ 19,500ರೂ.-20,000ರೂ. ದಾಟುವ ನಿರೀಕ್ಷೆಯಲ್ಲಿದ್ದೇವೆ ಎಂದು 'ದ ಬಾಂಬೆ ಬುಲ್ಲಿಯನ್ ಅಸೋಸಿಯೇಶನ್ಸ್' (BBA)ಅಧ್ಯಕ್ಷ ಸುರೇಶ್ ಹುಂಡಿಯಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈಗ ಮುಂಬೈ ಮಾರುಕಟ್ಟೆಯಲ್ಲಿ ಶುದ್ಧ ಚಿನ್ನ 19 ಸಾವಿರ ರೂ.ಇದ್ದರೆ ಸ್ಟ್ಯಾಂಡರ್ಡ್ ಚಿನ್ನ 10ಗ್ರಾಮ್‌ಗೆ 18,910 ರೂ.ಗಳಾಗಿವೆ.

ನ್ಯೂಯಾರ್ಕ್‌ನಲ್ಲಿ ಡಿಸೆಂಬರ್‌ಗಾಗಿ ಬಿಡುಗಡೆಯಾಗಲಿರುವ ಚಿನ್ನದ ಬೆಲೆ ಒಂದು ಔನ್ಸ್‌ಗೆ 1,237.90 ಡಾಲರ್ ಆಗಿದೆ. ಈ ವರ್ಷ ಇದು ಕನಿಷ್ಠ 1350ಡಾಲರ್ ಗೇರುವ ನಿರೀಕ್ಷೆಯಿದೆ. ಆರ್ಥಿಕ ಬಿಕ್ಕಟ್ಟು, ಕರೆನ್ಸಿ ಮೌಲ್ಯ ಕುಸಿತ, ಹಣದುಬ್ಬರ ಇತ್ಯಾದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಹಳದಿ ಲೋಹದತ್ತ ದೃಷ್ಟಿಹರಿಸಿದ್ದಾರೆ

ಭಾರತ ವಿಶ್ವದ ಅತಿದೊಡ್ಡ ಚಿನ್ನದ ಬಳಕೆದಾರ ರಾಷ್ಟ್ರವಾಗಿದೆ. ಜೂನ್‌ನಲ್ಲಿ ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡಿದ್ದರೂ ಭಾರತೀಯರ ಚಿನ್ನದ ಬೇಡಿಕೆಯ ಪ್ರಮಾಣ ಈ ವರ್ಷದ ಅರ್ಧ ಭಾಗದಲ್ಲಿ ದುಪ್ಪಟ್ಟಾಗಿದೆ.ಮುಂಬರುವ ಗಣೇಶ ಚೌತಿ, ದಸರಾ, ದೀಪಾವಳಿ ಹಬ್ಬ ಹಾಗೂ ಮದುವೆ ಋತುವಿನಲ್ಲಿ ಇದು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X