ಕ್ರೈಸ್ತರ ಕ್ಷಮೆ ಕೇಳಲಾರೆ : ಪ್ರಹ್ಲಾದ್ ರೆಮಾನಿ
ಬೆಳಗಾವಿ,
ಆ. 26 : ಕ್ರೈಸ್ತರ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ಯಾರೇ ಹೇಳಿದರೂ ಕ್ರೈಸ್ತರ ಕ್ಷಮೆ ಕೇಳಲಾರೆ ಎಂದು ಖಾನಾಪುರ ಶಾಸಕ ಪ್ರಹ್ಲಾದ್ ರೆಮಾನೆ ಖಡಾಖಂಡಿತವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. id="toptextpromo">ಬೆಳಗಾವಿ
ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ರೈಸ್ತ ಸೇರಿ ಅನ್ಯ ಧರ್ಮಕ್ಕೆ ಅವಮಾನ ಆಗುವಂತ ಹೇಳಿಕೆ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಖಾನಾಪುರ ಶಾಸಕ ಪ್ರಹ್ಲಾದ ರೆಮಾನೆ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ತಾಕೀತು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರೆಮಾನೆ, ಕ್ಷೇಮೆ ಯಾಚನೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖಾನಾಪೂರದಲ್ಲಿ ಹಿಂದೂಗಳನ್ನು ಮತಾಂತರಗೊಳಿಸುವ ಕಾರ್ಯ ಜೋರಾಗಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ಹೇಳಿಕೆ ನೀಡಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಅದರಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬ್ರಿಟಿಷರು
ದೇಶ ಬಿಟ್ಟು ಹೋಗುವಾಗ ಎರಡು ಅಂಶಗಳನ್ನು ಬಿಟ್ಟು ಹೋಗಿದ್ದಾರೆ. ಒಂದು ದೇಶ ವಿಭಜನೆ ಇನ್ನೊಂದು ಕ್ರೈಸ್ತ ಧರ್ಮ. ಕ್ರೈಸ್ತರು ಮತಾಂತರದ ಮೂಲಕ ಭಾರತವನ್ನು ಮುಗಿಸಲು ಹೊರಟಿದ್ದಾರೆ. ನಾನು ಕ್ರೈಸ್ತರಿಂದ ದೇಶವನ್ನು ರಕ್ಷಿಸಲು ಹೋರಾಡುತ್ತೇನೆ. ಕ್ರೈಸ್ತರನ್ನು ತೊಲಗಿಸಲು ನೀವು ಕೈಜೋಡಿಸಿ ಎಂದು ಖಾನಾಪುರ ಶಾಸಕ ಪ್ರಹ್ಲಾದ್ ರೆಮಾನೆ ಅವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.











Click it and Unblock the Notifications