ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನವೊಂದಕ್ಕೆ 69ಸಾವಿರ ವಿದ್ಯಾರ್ಥಿಗಳು ಬಂಕ್

By Mahesh
|
Google Oneindia Kannada News

69,000 kids in UK bunk school every day
ಲಂಡನ್, ಆ.26: ದ ಸನ್ ಪತ್ರಿಕೆಯ ವರದಿಗಳನ್ನು ನಂಬುವುದೇ ಆದರೆ, ಇಂಗ್ಲೆಂಡ್ ನಲ್ಲಿ ಸರಿಸುಮಾರು 69,000 ಮಕ್ಕಳು ಪ್ರತಿನಿತ್ಯ ಶಾಲೆಗಳನ್ನು 'ಬಂಕ್'(ಅಕ್ರಮ ಗೈರು ಹಾಜರಿ) ಮಾಡುತ್ತಿದ್ದಾರೆ.

ವರ್ಷಕ್ಕೆ ಕನಿಷ್ಠವೆಂದರೂ 3.7 ಮಿಲಿಯನ್ ಶೈಕ್ಷಣಿಕ ದಿನಗಳನ್ನು ಶಾಲೆಗಳು ಕಳೆದುಕೊಳ್ಳುತ್ತಿದೆ. ಇದಕ್ಕೆ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ತುತ್ತಾದ ಕುಟುಂಬದ ಮಕ್ಕಳು ರಜೆ ಮೇಲೆ ಹೋಗುತ್ತಿರುವುದು ಒಂದು ಕಾರಣ ಎನ್ನಲಾಗಿದೆ.

ಅಧಿಕೃತವಾಗಿ ರಜೆ ಪಡೆಯುವವರಿಗಿಂತ ಅನಧಿಕೃತವಾಗಿ ಬಂಕ್ ಮಾಡುವವರ ಸಂಖ್ಯೆ ಇಂಗ್ಲೆಂಡ್ ಅಲ್ಲದೆ ವೇಲ್ಸ್ ನ ಪ್ರಾಥಮಿಕ ಶಾಲೆಗಳಲ್ಲೂ ಅಧಿಕವಾಗಿದೆ ಎಂದು ಇಲ್ಲಿನ ಶಿಕ್ಷಣ ಇಲಾಖೆ ಕೂಡಾ ಒಪ್ಪಿಕೊಂಡಿದೆ.

ಆದರೆ, ಮಾಧ್ಯಮಿಕ ಹಂತ ಹಾಗೂ ಹೈಸ್ಕೂಲ್ ತಲುಪುವ ವೇಳೆಗೆ ಬಂಕ್ ಮಾಡುವವರ ಸಂಖ್ಯೆ ಯಲ್ಲಿ ಇಳಿಮುಖ ಕಂಡುಬಂದಿದೆ. ಮಳೆಗಾಲದ್ದಲ್ಲಂತೂ ವಾರ್ಷಿಕ 1.4ಮಿಲಿಯನ್ ದಿನಗಳು ಪಾಠ ಪ್ರವಚನ ಇಲ್ಲದೇ ಕಳೆದು ಹೋಗಿದೆ ಎಂದು ಶಾಲಾ ಸಚಿವ ನಿಕ್ ಗಿಬ್ ಹೇಳುತ್ತಾರೆ.

ಇದು ನಿಜಕ್ಕೂ ಮಹತ್ತರವಾದ ಸಮಸ್ಯೆ. ಪ್ರಮುಖ ಪಾಠಗಳನ್ನು ಮಕ್ಕಳು ತಪ್ಪಿಸಿಕೊಳ್ಳುವುದರಿಂದ ಭವಿಷ್ಯಕ್ಕೆ ತೊಂದರೆಯಾಗುವುದು ಖಂಡಿತ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ವೇಲ್ಸ್ ನ ಶಿಕ್ಷಣಾಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X