ಮಡಿವಾಳ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತ
ಬೆಂಗಳೂರು, ಆ.24: ನಗರದ ಮಡಿವಾಳ ಬಳಿ ನಿರ್ಮಿಸಲಾಗಿರುವ ನೂತನ ಅಂಡರ್ ಪಾಸ್ ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಚಾಲನೆ ನೀಡಿದರು. 90 ದಿನಗಳ ಡೆಡ್ ಲೈನ್ ಇಟ್ಟುಕೊಂಡು 58 ದಿನಕ್ಕೆ ಕಾಮಗಾರಿ ಪೂರೈಸಿದ ಬಿಬಿಎಂಪಿ ಸಾಧನೆಯನ್ನು ಸಿಎಂ ಶ್ಲಾಘಿಸಿದರು.
ಈ ಪ್ರದೇಶದಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿರುವುದರಿಂದ ಈ ಅಂಡರ್ ಪಾಸ್ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರೈಸುವುದು ಅವಶ್ಯವಾಗಿತ್ತು. ಸುಮಾರು 8 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಹೊಸೂರು ರಸ್ತೆ ಕಡೆ ತೆರಳುವ ವಾಹನಗಳಿವೆ ಸಹಕಾರಿಯಾಗಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಯಡಿಯೂರಪ್ಪ ಅವರೊಂದಿಗೆ ಮೇಯರ್ ಎಸ್ ಕೆ ನಟರಾಜ್ , ಸಂಸದ ಅನಂತ್ ಕುಮಾರ್, ಶಾಸಕ ರಾಮಲಿಂಗಾರೆಡ್ಡಿ ಇದ್ದರು. ಈ ಅಂಡರ್ ಪಾಸ್ ಸಿಲ್ಕ್ ಬೋರ್ಡ್ ಮೂಲಕ ಎಲೆವೇಟೆಡ್ ಎಕ್ಸ್ ಪ್ರೆಸ್ ವೇ ಫ್ಲೈ ಓವರ್ ಗೆ ಸಂಪರ್ಕನೀಡಲಿದ್ದು, ಎಲೆಕ್ಟ್ರಾನಿಕ್ ಸಿಟಿ ಕಡೆ ಸಂಚಾರ ಸರಾಗವಾಗಲಿದೆ.
ಬಿಬಿಎಂಪಿ ಸುಮಾರು 11 ಸಿಗ್ನಲ್ ಫ್ರೀ ಕಾರಿಡಾರ್ ಗಳು, ವೆಲ್ಲಾರ ಜಂಕ್ಷನ್ ನಿಂದ ಎಲೆಕ್ಟ್ರಾನಿಕ್ ಸಿಟಿ ವರೆಗಿನ ಹಾದಿಯಲ್ಲಿ ಪ್ರಮುಖ ಕಡೆಗಳಲ್ಲಿ 8 ಕಡೆ ಅಂಡರ್ ಪಾಸ್ ಗಳನ್ನು ನಿರ್ಮಿಸಲಿದೆ.











Click it and Unblock the Notifications