ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮುಂದುವರಿದ ಸಾವಿನ ಮೆರವಣಿಗೆ

By Prasad
|
Google Oneindia Kannada News

Karnataka crime beat
ಬೆಂಗಳೂರು, ಆ. 21 : ಬೆಗ್ಗರ್ಸ್ ಕಾಲೋನಿಯಲ್ಲಿ ವಿಷಾಹಾರದಿಂದ 24 ಭಿಕ್ಷಕರು ಮರಣ ಹೊಂದಿರುವ ಹಿಂದೆಯೇ ರಾಜ್ಯದಲ್ಲಿ ಸಾವುಗಳ ಸರಮಾಲೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಕಳ್ಳಭಟ್ಟಿ ಸೇವಿಸಿ ಮೂವರು ಮತ್ತು ಇನ್ನಿಬ್ಬರು ಮಾರಕಾಸ್ತ್ರಗಳಿಂದ ಕೊಚ್ಚಿಸಿಕೊಂಡು ಮರಣಕ್ಕೀಡಾಗಿದ್ದಾರೆ. ಮಂಗಳೂರಿನಲ್ಲಿ ಕೂಡ ಇಬ್ಬರು ಅಮಾಯಕರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಕಳ್ಳಭಟ್ಟಿ ದುರಂತ : ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ರಾಜಾನುಕುಂಟೆಯ ಬ್ಯಾತ ಗ್ರಾಮದಲ್ಲಿ ಕಳೆದ ರಾತ್ರಿ ಕಳ್ಳಭಟ್ಟಿ ಸೇವಿಸಿ ಮೂವರು ಗ್ರಾಮಸ್ಥರು ಪ್ರಾಣ ಕಳೆದುಕೊಂಡಿದ್ದಾರೆ. ಕಳ್ಳಭಟ್ಟಿ ಸೇವಿಸಿರುವ ಇನ್ನೂ ಐವರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೂವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ ಇಬ್ಬರನ್ನು ಸ್ಥಳೀಯ ಆಸ್ಪತ್ರೆದೆ ಸೇರಿಸಲಾಗಿದೆ. ಸ್ಥಳೀಯರು ಈ ದುರಂತ ಸಂಭವಿಸಿದ್ದು ಕಳ್ಳಭಟ್ಟಿಯಿಂದಲೇ ಎಂದು ಹೇಳುತ್ತಿದ್ದರೆ, ಪೊಲೀಸರು ತನಿಖೆ ನಡೆಸಿದ ನಂತರ ಸಾವಿಗೆ ಕಾರಣ ಹುಡುಕುವುದಾಗಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಬ್ಬರ ಹತ್ಯೆ :
ಚಿಕ್ಕಬಳ್ಳಾಪುರದ ಜಾತವಾರ ಗೇಟ್ ಬಳಿ ಶನಿವಾರ ಬೆಳಗಿನ ಜಾವ ಹಾಡುಹಗಲೇ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಾರುತಿ ಓಮ್ನಿಯಲ್ಲಿ ಹೋಗುತ್ತಿದ್ದ ನರಸಿಂಹ ಸ್ವಾಮಿ ಮತ್ತು ಪೆಟ್ರೋಲ್ ಮಂಜು ಎಂಬಿಬ್ಬರು ಕೊಲೆಗೀಡಾದವರು. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಜನರು ನೋಡನೋಡುತ್ತಿದ್ದಂತೆ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗಡುಕರ ವಿವರ ಮತ್ತು ಸುಳಿವು ಇನ್ನೂ ತಿಳಿದುಬಂದಿಲ್ಲ. ಈ ಘಟನೆಯಿಂದ ಜಾತವಾರದ ನಾಗರಿಕರು ತೀವ್ರ ಆತಂಕಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ಬಾಲಕನಿಂದ ಹತ್ಯೆ : ತಂದೆಯ ಅಪ್ಪಣೆಯಿಲ್ಲದೆ ಸ್ಕಾರ್ಪಿಯೋ ರಸ್ತೆಗಿಳಿಸಿದ 15 ವರ್ಷದ ಬಾಲಕನೊಬ್ಬ ವಾಹನವನ್ನು ಅಡ್ಡಾದಿಡ್ಡಿ ಓಡಿಸಿ ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದಾನೆ. ಬಾಲಕ ನಗರದ ಕೇಂಬ್ರಿಜ್ ವಿದ್ಯಾಲಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಕದರಿಯ ದೀಕ್ಷಿತ್ ಮತ್ತು ತೋಕೂರಿನ ಗಣೇಶ್ ಎಂಬಿಬ್ಬರೇ ಸಾವಿಗೀಡಾಗಿರುವ ದುರ್ದೈವಿಗಳು. ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X