3 ಲಕ್ಷ ನಕಲಿ ಮೊಬೈಲ್ ಸಂಪರ್ಕ ಜಾಲ ಪತ್ತೆ

ಈ ಇಬ್ಬರೂ ಅಧಿಕಾರಿಗಳು ಸಿಮ್ ಮಾರಾಟಗಾರರ ಜತೆ ಶಾಮೀಲಾಗಿ 3ಲಕ್ಷಕ್ಕೂ ಅಧಿಕ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ವಿತರಿಸಿದ್ದು, ಇದರಿಂದ 7 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಎಂಟಿಎನ್ ಎಲ್ ನ ಮೊಬೈಲ್ ಸಂಪರ್ಕ್ ಮತ್ತು ಸೇವಾ ವಿಭಾಗದ ಜಾಗತಿಕ ವ್ಯವಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಮಾರಾಟ ವಿಭಾಗದ ಸಹಾಯಕ ಪ್ರಧಾನ ಅಧಿಕಾರಿಯ ವಿರುದ್ದ ಮೊಕದ್ದಮೆ ದಾಕಲು ಮಾಡಿರುವ ಸಿಬಿಐ ಮುಂದಿನ ತನಿಖೆ ನಡೆಸುತ್ತಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಈ ಇಬ್ಬರೂ ಅಧಿಕಾರಿಗಳು 9 ಸಿಮ್ ವಿತರಣೆಗಾರರ ಜತೆ ಶಾಮೀಲಾಗಿ ನಕಲಿ ವಿಳಾಸದಾರರಿಗೆ ಸಿಮ್ ಕಾರ್ಡ್ ನೀಡಿದ್ದಾರೆ ಎನ್ನಲಾಗಿದೆ. ಸಿಬಿಐ ಈ ಸಂಭಂದ 9 ವಿತರಣಾದಾರರು, ನಿಗಮದ ಇಬ್ಬರು ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳನ್ನು ಶೋಧಿಸಿದೆ. ಅಲ್ಲಿ ನಕಲಿ ಹೆಸರುಗಳಿಗೆ ಸಿಮ್ ಕಾರ್ಡ್ ವಿತರಿಸಿರುವ ಕುರಿತು ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.











Click it and Unblock the Notifications