ಮೈಸೂರು ದಸರೆಗೆ ಬಿಗಿಯಾದ ಭದ್ರತೆ
ಮೈಸೂರು,
ಆ. 19 : ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಬಿಗಿಯಾಗ ಭದ್ರತೆ ಒದಗಿಸುವುದಕ್ಕೆ ಕರ್ನಾಟಕ ಪೊಲೀಸ್ ಬದ್ಧವಾಗಿದೆ ಹಾಗೂ ಈ ದಿಶೆಯಲ್ಲಿ ಸರ್ವತೋಮುಖವಾದ ಒಂದು ಭದ್ರತಾ ಕಾರ್ಯಯೋಜನೆಯನ್ನು ರೂಪಿಸಿದೆ ಎಂದು ಕರ್ನಾಟಕ ಡಿಜಿಪಿ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹತ್ತು ದಿನಗಳ ದಸರಾ ಅಕ್ಟೋಬರ್ 8ರ ಶುಕ್ರವಾರದಿಂದ ಆರಂಭಗೊಳ್ಳಲಿದೆ. id="toptextpromo">ಈ
ವಿಚಾರವಾಗಿ ದಕ್ಷಿಣ ಭಾರತದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಕೂಲಂಕಷ ಸಮಾಲೋಚನೆ ನಡೆಸಲಾಗಿದೆ. ಶಾಂತಿಯಿಂದ ಉತ್ಸವ ನಡೆಯುವುದಕ್ಕೆ ಅಗತ್ಯವಾದ ಎಲ್ಲ ಭಧ್ರತಾ ವ್ಯವಸ್ಥೆಗಳನ್ನೂ ಅಳವಡಿಸಿಕೊಳ್ಳಲಾಗುತ್ತದೆ ಎಂದು ಮೈಸೂರಿನಲ್ಲಿ ಗುರುವಾರ ಅವರು ಸುದ್ದಿಗಾರರಿಗೆ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗೆ
ನಡೆದ ಮಹಾ ಕುಂಭ ಮೇಳದಲ್ಲಿ ಮಾಡಲಾಗಿದ್ದ ಭದ್ರತಾ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಲು ಉತ್ತರಖಂಡದ ಪೊಲೀಸ್ ಮುಖ್ಯಸ್ಥರೊಂದಿಗೆ ಕರ್ನಾಟಕ ಪೊಲೀಸ್ ಸಮಾಲೋಚನಾ ಸಭೆ ನಡೆಸಿದೆ ಎಂದೂ ಅಜಯ್ ಕುಮಾರ್ ಹೇಳಿದರು. ಕುಂಭ ಮೇಳದಲ್ಲಿ ಒಂದೂವರೆ ಕೋಟಿ ಜನ ಭಾಗವಹಿಸಿದ್ದರು.











Click it and Unblock the Notifications