ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.30 ಕ್ಕೆ ಬಿಬಿಎಂಪಿ ಬಜೆಟ್ ಮಂಡನೆ?

By Mahesh
|
Google Oneindia Kannada News

BBMP budget to be out on august 30
ಬೆಂಗಳೂರು, ಆ.18: ಸುಮಾರು ಏಳು ಬಾರಿ ಮುಂದೂಡಲ್ಪಟ್ಟ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಜೆಟ್ ಮಂಡನೆಗೆ ಕೊನೆಗೂ ಮಹೂರ್ತ ಕೂಡಿ ಬಂದಿದೆ. ಈ ತಿಂಗಳ 30ರಂದು ಮಂಡನೆಯಾಗಲಿದೆ.

ಚುನಾಯಿತ ಜನಪ್ರತಿನಿಧಿಗಳು ಬೆಂಗಳೂರಿನ ಅಧಿಕಾರ ವಹಿಸಿಕೊಂಡ ಮೇಲೆ ಮಂಡನೆಯಾಗುತ್ತಿರುವ ಪ್ರಥಮ ಬಜೆಟ್ ಸಹಜವಾಗಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಆ.28 ಕ್ಕೆ ಪಾಲಿಕೆ ಮಾಸಿಕ ಸಭೆ ನಡೆಯಲಿದೆ. ಆ. 30 ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪಿ ಎನ್ ಸದಾಶಿವ ಅವರು ಬಜೆಟ್ ಮಂಡಿಸಲಿದ್ದಾರೆ. ಸೆಪ್ಟೆಂಬರ್ ಮಾಸಿಕ ಸಭೆಯಲ್ಲಿ ಬಜೆಟ್ ಮೇಲೆ ಎರಡು ದಿನಗಳ ಚರ್ಚೆ ನಡೆಸಿ ನಂತರ ಅನುಮೋದನೆ ಪಡೆದುಕೊಳ್ಳಲಿದೆ.

ಆದರೆ, ಬಿಬಿಎಂಪಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಪಾಲಿಕೆಗೆ 1,500 ಕೋಟಿ ವಿಶೇಷ ಅನುದಾನ ನೀಡಬೇಕೆಂದು ಮೇಯರ್ ಎಸ್.ಕೆ ನಟರಾಜ್ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಅಷ್ಟು ಪ್ರಮಾಣದ ಅನುದಾನ ನೀಡಲು ಸಿದ್ಧವಾಗಿಲ್ಲ ಎಂದು ಹಣಕಾಸು ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ. ಬಿಬಿಎಂಪಿಗೆ ಸುಮಾರು 500 ಕೋಟಿ ನೀಡಲು ಸರ್ಕಾರ ಮುಂದೆ ಬಂದಿದೆ.

ಬಿಬಿಎಂಪಿ ಬಜೆಟ್ ಮಂಡನೆ ಮಹೂರ್ತದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರತಿಪಕ್ಷದ ಸದಸ್ಯರು, ಈಗಾಗಲೇ ಬ್ಯಾಂಕ್ ಗಳಿಂದ ಸಾಲ ಪಡೆದು ಖಜಾನೆ ಖೋತಾ ಆಗಿರುವ ಸಂದರ್ಭದಲ್ಲಿ ದಿಢೀರ್ ಎಂದು ಬಜೆಟ್ ಮಂಡನೆ ದಿನಾಂಕ ನಿಗದಿ ಮಾಡಿರುವುದು ಹಾಸ್ಯಾಸ್ಪದ ಎಂದು ಪ್ರತಿಪಕ್ಷ ನಾಯಕ ಎಂ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X