ಸತ್ಯಾತ್ಮತೀರ್ಥರಿಂದ ರಾಜಧರ್ಮ ಬೋಧನೆ

ಸವಣೂರಿನ ಶ್ರೀ ಸತ್ಯಬೋಧ ಮಂಟಪದಲ್ಲಿ ಉಪದೇಶಾಮೃತ ನೀಡಿದ ಶ್ರೀಗಳು, ರಾಜರು ಆಪತ್ಕಾಲದಲ್ಲಿ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಮಹಾಭಾರತದ ಸಂದೇಶಗಳನ್ನು ವಿವರಿಸಿದರು.
ರಾಜರು ದುರ್ವಿಚಾರ, ದುಶ್ಚಟಗಳ ಬಗ್ಗೆ ಅತಿಯಾದ ಆಸಕ್ತಿ ಹೊಂದಿದಲ್ಲಿ ತಮ್ಮ ನೈತಿಕತೆ, ಪ್ರಾಮಾಣಿಕತೆ ಹಾಗೂ ಅಂತಃಸತ್ವವನ್ನು ಕಳೆದುಕೊಳ್ಳುತ್ತಾರೆ. ಜನತೆ ರಾಜರ ಈ ನೂನ್ಯತೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ರಾಜರು ಪ್ರತಿಯೊಂದು ವಿಷಯದಲ್ಲಿ ಗಂಭೀರ ಚಿಂತನೆ ಮಾಡಬೇಕು. ಬಳಿಕ ಅದನ್ನು ಸಿಂಹದಂತೆ ಕಾರ್ಯಗತಗೊಳಿಸಬೇಕು ಎಂದರು.
ರಾಷ್ಟ್ರ, ಸೈನ್ಯ, ಸಂಘಕ್ಕೆ ಆಪತ್ತುಗಳು ಬಂದಾಗ ತಕ್ಷಣ ಕಾರ್ಯಪ್ರವೃತ್ತನಾಗಬೇಕು. ಯುದ್ದ, ಪ್ರತಿಭಟನೆ ಅಥವಾ ಪಲಾಯನ ಯಾವದಾದರೂ ಒಂದನ್ನು ತಕ್ಷಣಕ್ಕೆ ತೋರಬೇಕು. ವಿಳಂಬ ಮಾಡಿ ಕೈಗೊಳ್ಳುವ ಕಾರ್ಯಗಳು ನಿಶ್ಪಲವಾಗಿದ್ದು, ದುರ್ಜನರು, ವೈರಿಗಳೊಂದಿಗೆ ಸದಾಕಾಲ ಪೌರುಷ ತೋರಬಾರದು. ಜನತೆ ತಮ್ಮ ಕಾರ್ಯ ಹಾಗೂ ವರ್ತನೆಯಲ್ಲಿ ಉದಾಸೀನ ಮಾಡಿದಲ್ಲಿ ಶಿಕ್ಷೆ ದಂಡದ ಎಚ್ಚರಿಕೆ ಇರಬೇಕು. ಪ್ರಸಂಗ ಬಂದಾಗ ವಿನೀತ ಭಾವವೂ ಇರಬೇಕು. ಅವಕಾಶ ಲಭಿಸಿದಾಗ ಅಗ್ನಿಯ ಜ್ವಾಲೆಯಂತೆ ಪ್ರಕಟಗೊಳ್ಳಬೇಕು ಎಂದರು.
ಕೃತಘ್ನರಾದ ವ್ಯಕ್ತಿಗಳಿಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಸಹಾಯ ಮಾಡಬೇಕು. ಉಪಕಾರದ ಶೇಷವನ್ನು ಉಳಿಸಿಕೊಳ್ಳಬೇಕು. ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಕೋಗಿಲೆಯಂತೆ ಸಿಹಿಯಾದ ಮಾತುಗಳಿರಬೇಕು. ದುರ್ಜನರಿಗೆ ಮುಳ್ಳುಗಳಿರುವ ವರಾಹದಂತೆ ಗೋಚರಿಸಬೇಕು. ರಾಜರು ಸ್ವತಃ ಉನ್ನತವಾದ ವ್ಯಕಿತ್ವ ವರ್ತನೆ ಹೊಂದಿರಬೇಕು. ಎಲ್ಲ ಪ್ರಜೆಗಳಿಗೂ ಆದರ್ಶಪ್ರಾಯನಾಗಿರಬೇಕು.
ಮನೆ-ಮನಸ್ಸಿನಲ್ಲಿ ಸ್ಥಳಾವಕಾಶ ಹೊಂದಿರಬೇಕು. ಹೃದಯವೈಶಾಲ್ಯತೆ ಹೊಂದಿರಬೇಕು. ಸತ್ಕರ್ಮಗಳಿಂದ ಜನರನ್ನು ಸಂತೋಷಗೊಳಿಸಬೇಕು. ಮಿತ್ರನಂತೆ ಸಜ್ಜನರಿಗೆ ಹಿತ ಬಯಸಬೇಕು. ಶತ್ರುಗಳ ಕುಶಲವನ್ನೂ ವಿಚಾರಿಸುವ ಮೂಲಕ, ಧ್ವೇಶದ ಉಗ್ರತೆ ಕಡಿಮೆಗೊಳಿಸಿಕೊಳ್ಳಬೇಕ ಎಂದು ತಿಳಿಸಿದರು.
ಸಾಧಿಸುವ ಛಲ ಮುಖ್ಯ: ನಿರಾಸೆ, ನಪುಂಸಕತ್ವ, ವೈರಾಗ್ಯದ ಭಾವನೆ ಬಿಡಬೇಕು. ಆಶಾವಾದದೊಂದಿಗೆ ಸಾಧಿಸುವ ಛಲ ಹೊಂದಿರಬೇಕು. ದುರಹಂಕಾರ ಇರಬಾರದು. ಒಳ್ಳೆಯ ಕೆಲಸಕ್ಕೆ ಬರುವ ಅಪವಾದಗಳಿಗೆ ಹೆದರಬಾರದು. ಕಾಲಕ್ಕಾಗಿ ಪ್ರತೀಕ್ಷೆ ಮಾಡಬಾರದು. ಶೀಘ್ರದಲ್ಲಿ ಗುರಿಯನ್ನು ಪಡೆದುಕೊಳ್ಳುವ ತವಕ ಹೊಂದಿರಬೇಕು. ರಾಜರ ದೋಷಗಳು ಶತ್ರುವಿಗೆ ತಿಳಿಯಬಾರದು. ಶತ್ರುಗಳ ದೋಷಗಳ ಬಗ್ಗೆ ಅಧ್ಯಯನವನ್ನೇ ಮಾಡಬೇಕು. ಮಂತ್ರಾಲಯ (ವಿಧಾನಸೌಧ)
ದಲ್ಲಿನ ವಿಚಾರ, ಚಿಂತನೆಗಳು ಮೊದಲೇ ಬಹಿರಂಗವಾಗಬಾರದು ಎಂದು ರಾಜಧರ್ಮಗಳನ್ನು ವಿವರಿಸಿದರು.
ಬಹಳ ಜನರಿದ್ದಲ್ಲಿ ಕಲಹ, ಇಬ್ಬರಿದ್ದಲ್ಲಿ ಹರಟೆ, ಏಕಾಂತವಿದ್ದಲ್ಲಿ ಸಾಧನೆಯಾಗುತ್ತದೆ. ಬಕ ಪಕ್ಷಿಯಂತೆ ಏಕಾಂತದಲ್ಲಿ ಚಿಂತನೆ ಮಾಡಿ. ಚಿಂತನೆ ಆಲೋಚನೆಗಳು ಇಲ್ಲದಿದ್ದಲ್ಲಿ ತಪ್ಪು ಹೆಜ್ಜೆಗಳಾಗುತ್ತದೆ. ತಪ್ಪಿತಸ್ಥರಿಗೆ ದಂಡ ವಿಧಿಸುವಾಗಲೂ ಎಚ್ಚರಿಕೆ ತೋರಿ. ಪ್ರತಿ ಸಲವೂ ಶಿಕ್ಷೆಗೆ ಮುಂದಾಗದೇ ಕೆಲವು ಬಾರಿ ಕಂಡೂ ಕಾಣದಂತೆ ಇರಿ.
ಪರಿಸ್ಥಿತಿಗಳಿಗೆ ಅನುಗುಣವಾಗಿ ಕುರುಡ, ಕಿವುಡರಂತೆ ವರ್ತಿಸಿ. ಶತ್ರುಗಳ ನಿಯಂತ್ರಣಕ್ಕೆ ಅವರಲ್ಲಿ ಆಸೆಗಳನ್ನು ಹುಟ್ಟಿಸಿ. ಅನಿವಾರ್ಯ ಕಾರಣಗಳನ್ನು ಒಡ್ಡಿ, ನಿಷ್ಟುರತೆಯಿಂದ ತಪ್ಪಿಸಿಕೊಳ್ಳಿ. ಆಪತ್ತುಗಳು ಬರುವ ಮುನ್ನವೇ ಪರಿಹಾರ ಮಾರ್ಗ ಕಂಡುಕೊಳ್ಳಿ. ಅಂತಿಮ ಹಂತದಲ್ಲಿ ಭಯಕ್ಕೆ ಒಳಗಾಗಬೇಡಿ. ಆಪತ್ತುಗಳನ್ನು ಎದುರಿಸಲು ಪೂರ್ವಸಿದ್ದತೆಯಲ್ಲಿ ಇರಿ ಎಂದು ರಾಜಧರ್ಮದ ಸಾರವನ್ನು ವಿವರಿಸಿದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications