ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಬಗ್ ಎದುರಿಸಲು ಸನ್ನದ್ಧರಾಗಿ...

By Mrutyunjaya Kalmat
|
Google Oneindia Kannada News

Superbug
ನವದೆಹಲಿ, ಆ. 12 : ಎಚ್1ಎನ್1 ಭೂತದಿಂದ ಹೊರಬರುತ್ತಿದ್ದಂತೆಯೇ ಇದೀಗ ಸೂಪರ್ ಬಗ್ ಎಂಬ ಮತ್ತೊಂದು ಭಯಾನಕ ವೈರಾಣು ವ್ಯಾಪಕವಾಗ ತೊಡಗಿದೆ. ಭಾರತದ ಆಸ್ಪತ್ರೆಯಿಂದ ದಾಖಲಾಗಿರುವ ಸೂಪರ್ ಬಗ್ ಜಗತ್ತಿನಾದ್ಯಂತ ಶೀಘ್ರ ಗತಿಯಲ್ಲಿ ಹರಡತೊಡಗಿದೆ.

ಸೂಪರ್ ಬಗ್ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗನೆ ಹರಡುತ್ತದೆ. ಮನುಷ್ಯನ ದೇಹದಲ್ಲಿರುವ ಜೀವಕೋಶಗಳನ್ನು ಶೀಘ್ರ ನಾಶ ಮಾಡುವ ಈ ಸೂಪರ್ ಬಗ್ ವೈರಾಣು ಮೊಟ್ಟ ಮೊದಲ ಬಾರಿಗೆ ಭಾರತದ ವಿವಿಧ ನಗರಗಳಲ್ಲಿ ಕಾಣಿಸಿಕೊಂಡಿದೆ. ಬ್ರಿಟನ್ ಮತ್ತು ಅಮೆರಿಕದಲ್ಲಿ ಇದರ ಸಂಶೋಧನೆ ಆರಂಭವಾಗಿದ್ದು, ಸೂಪರ್ ಬಗ್ ವೈರಾಣುವಿಗೆ ನ್ಯೂಡೆಲ್ಲಿ ಮೆಟೆಲ್ಲೂ ಬೀಟಾ ಲಾಕ್ಟಿಮೇಜ್ ಅಥವಾ ಎನ್ ಡಿಎಂ-1 ಎಂದು ಹೆಸರಿಡಲಾಗಿದೆ. (New Delhi metallo-beta-lactamase, or NDM-1)

ಅಮೆರಿಕದಲ್ಲಿ ಮೂರು ಮಂದಿಗೆ ಸೂಪರ್ ಬಗ್ ವೈರಾಣು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಕೂಡಾ ಇತ್ತೀಚೆಗೆ ಭಾರತದ ಪ್ರವಾಸ ಕೈಗೊಂಡಿದ್ದಲ್ಲದೇ, ಅಲ್ಲಿನ ಚಿಕಿತ್ಸೆಯನ್ನು ಪಡೆದುಕೊಂಡ ಬಂದವರಾಗಿದ್ದಾರೆ ಎಂದು ಅಮೆರಿಕ ಹೇಳಿದೆ. ಸೂಪರ್ ಬಗ್ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಇತ್ತೀಚೆಗೆ ಮುಖ್ಯವಾಗಿ ಏಷಿಯನ್ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿರುವ ವ್ಯಕ್ತಿಗಳಲ್ಲಿ ಇದು ಕಂಡು ಬಂದಿದೆ.

ಸೂಪರ್ ಬಗ್ ವ್ಯಾಪಕವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅ ವೈರಾಣು ನಿಯಂತ್ರಣಕ್ಕೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಭಾರತದಿಂದ ಆರಂಭವಾಗಿರುವ ಸೂಪರ್ ಬಗ್ ವೈದ್ಯಕೀಯ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರಿರುವುದಂತೂ ಸುಳ್ಳಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X