ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಶೈವ ಸಿಎಂಗೇಕೆ ಪದೆಪದೇ ಕಿರಿಕಿರಿ ?

By Mrutyunjaya Kalmat
|
Google Oneindia Kannada News

BSY-Rambapuri Seer
ದಾವಣಗೆರೆ, ಆ. 10 : ರಾಜ್ಯವನ್ನಾಳಿದ ಎಲ್ಲ ವೀರಶೈವ ಮುಖ್ಯಮಂತ್ರಿಗಳು ತಮ್ಮ ಆಡಳಿತಾವಧಿಯಲ್ಲಿ ಇತರರಿಂದ ಕಿರಿಕಿರಿ ಎದುರಿಸಿದ್ದೇ ಹೆಚ್ಚು. ಇಷ್ಟಾದರೂ ಸಮಾಜದ ಮುಖಂಡರು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಪ್ರಶ್ನಿಸಿದ್ದಾರೆ.

ಇಲ್ಲಿನ ರೇಣುಕ ಮಂದಿರದಲ್ಲಿ ಅಷಾಢ ಮಾಸದ ಶಿವಪೂಜಾನುಷ್ಠಾನ, ಧರ್ಮ ಸಭೆ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ನಿಜಲಿಂಗಪ್ಪ, ಬಿಡಿ ಜತ್ತಿ, ಎಸ್ ಆರ್ ಬೊಮ್ಮಾಯಿ, ಜೆಎಚ್ ಪಟೇಲ್ ಅವರೆಲ್ಲ ತಮ್ಮ ಅಧಿಕಾರ ಅವಧಿಯಲ್ಲಿ ಒಂದಿಲ್ಲೊಂದು ತೊಂದರೆ ಅನುಭವಿಸಿದ್ದಾರೆ. ಯಡಿಯೂರಪ್ಪ ಅವರಿಗೂ ಕೂಡಾ ಸುಸೂತ್ರ ಆಡಳಿತ ನಡೆಸಲು ಬಿಡುತ್ತಿಲ್ಲ. ಹಗಲು ರಾತ್ರಿ ಕೆಲಸ ಮಾಡುವ ನಾಯಕನಿಗೆ ಹೀಗೇಕೆ ತೊಂದರೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಏನಾದರೂ ಹೆಚ್ಚು ಕಡಿಮೆಯಾಗಿ ಯಡಿಯೂರಪ್ಪ ಪದವಿ ಕಳೆದುಕೊಂಡರೆ ಮುಂದಿನ 50 ವರ್ಷಗಳ ಕಾಲ ವೀರಶೈವರೊಬ್ಬರು ಮುಖ್ಯಮಂತ್ರಿಯಾಗುವುದು ಕಷ್ಟ. ಪಿತೂರಿಗಾರರ ವಿರುದ್ಧ ಏಕೀಕೃತ ವೀರಶೈವ ಸಮಾಜ ಗುಟುರು ಹಾಕಿದರೆ ಯಾವ ದುಷ್ಟಶಕ್ತಿಗಳು ಏನೂ ಮಾಡಲಾರವು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಅದ್ಯಾವ ಗಳಿಗೆಯಲ್ಲಿ ಮುಖ್ಯಮಂತ್ರಿ ಪದವಿ ಅಲಂಕರಿಸಿದರೋ ಗೊತ್ತಿಲ್ಲ. ದಿನ ಬೆಳಗಾದರೆ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಬೇರೆಯವರು ಈ ಸ್ಥಾನದಲ್ಲಿದ್ದರೆ ಏನಾಗುತ್ತಿತ್ತೋ. ಆದರೆ, ಯಡಿಯೂರಪ್ಪ ಅವರ ಗುಂಡಿಗೆ ಗಟ್ಟಿ ಇದೆ. ಹೀಗಾಗಿ ಯಾರಿಗೂ ಸೊಪ್ಪು ಹಾಕದೆ ಮುನ್ನುಗ್ಗುತ್ತಿದ್ದಾರೆ. ಸಮಗ್ರ ಕರ್ನಾಟಕ ಅಭಿವೃದ್ಧಿಯ ಕನಸು ಕಂಡ ಮುಖ್ಯಮಂತ್ರಿಗೆ ಸಮಾಜದ ಬೆಂಬಲ ಅಗತ್ಯ ಎಂದು ಸ್ವಾಮೀಜಿಗಳು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X