ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದಿ ದನಗಳನ್ನು ಕೇಶವಕೃಪದಲ್ಲಿ ತುಂಬಿ

By Mrutyunjaya Kalmat
|
Google Oneindia Kannada News

Devegowda
ಹಾಸನ, ಆ. 8 : ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಇದೀಗ ಹೊಸ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಮುದಿ ಜಾನುವಾರುಗಳನ್ನು ಬೆಂಗಳೂರಿನ ಆರ್ಎಸ್ಎಸ್ ಕೇಂದ್ರ ಕಚೇರಿ ಕೇಶವಕೃಪ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸಕ್ಕೆ ತುಂಬುವ ವಿನೂತನ ಶೈಲಿಯ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯ ನೂರಾರು ಲಾರಿಗಳಲ್ಲಿ ಉಪಯೋಗಕ್ಕೆ ಬಾರದ ಮತ್ತು ರೈತರಿಗೆ ಹೊರೆಯಾದ ಎಮ್ಮೆ, ಹಸುಗಳನ್ನು ತುಂಬಿಕೊಂಡು ಕೇಶವಕೃಪ ಮತ್ತು ಸಿಎಂ ಸಾಹೇಬರ ಮನೆ ಬಳಿ ಬಿಡಲಾಗುವುದು. ಬೇಕಿದ್ದರೆ ಅವರೆ ಸಾಕಲಿ. ಇದರಲ್ಲಿ ಯಾವುದೇ ದಾಕ್ಷಿಣ್ಯವಿಲ್ಲ ಎಂದರು.

ಒಂದು ವರ್ಗದ ಆಹಾರ ಪದ್ದತಿಯನ್ನು ಕಿತ್ತುಕೊಳ್ಳುವುದು ಸರಿಯಲ್ಲ. ರೈತರ ಸಂಕಷ್ಟ ಗೊತ್ತಿದ್ದರೆ ಈ ನಿರ್ಣಯ ಕೈಗೊಳ್ಳುತ್ತಿರಲಿಲ್ಲ ಎಂದ ಅವರು, ಗೋಹತ್ಯೆ ವಿರೋಧಿಸಿ ಸಂಸತ್ತಿನಲ್ಲೂ ದನಿ ಎತ್ತುವೆ ಎಂದರು. ಗೋಹತ್ಯೆ ಕಾಯ್ದೆ ವಿರೋಧಿಸಿ ರಾಷ್ಟ್ರಪತಿಗಳನ್ನು ಭೇಟಿ ಮನವಿ ಸಲ್ಲಿಸಿರುವುದನ್ನು ಮಾಧ್ಯಮಗಳು ಸರಿಯಾಗಿ ವರದಿ ಮಾಡಲಿಲ್ಲ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಬೆಂಗಳೂರಿನಿಂದ ಬಳ್ಳಾರಿವರೆಗೆ 427 ಕಿಮೀ ಪಾದಯಾತ್ರೆ ಮೂಲಕ ಹೋಗುವುದು ಹುಡುಕಾಟವೇ ? ನಾವೆಲ್ಲ 70-80 ಕಿಮೀ ಮಾಡಿದ್ದೇವೆ ಅಷ್ಟೇ. ನಮಗೆ ಅವರಷ್ಟು ಅನುಭವವಿಲ್ಲ. ನಮ್ಮದು ಸಣ್ಣ ಪಾರ್ಟಿ ಎಂದು ಗೌಡರು ವ್ಯಂಗ್ಯವಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X