ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿಸೋಜಿಗ : ಚೀನಾದಲ್ಲೊಬ್ಬ ಆಧುನಿಕ ಕುಂಭಕರ್ಣ!

By Prasad
|
Google Oneindia Kannada News

Kumbhakarna
ಬೀಜಿಂಗ್, ಆ. 7 : ಚೀನಾದ ಈ ಭೂಪನನ್ನು ಆಧುನಿಕ ಕುಂಭಕರ್ಣ ಅಂತ ಕರೆಯಬಹುದು. ಏಕೆಂದರೆ ಈವಯ್ಯ ಒಮ್ಮೆ ಮಲಗಿದರೆ ಏಳುವುದು ಆರು ಮಾಸಗಳು ಕಳೆದ ನಂತರವೇ! ಆರು ತಿಂಗಳ ನಂತರ ಕಣ್ಣುಬಿಟ್ಟರೆ ಈತ ನಿದ್ದೆಗೆ ಜಾರುವುದು ಆರು ತಿಂಗಳ ನಂತರವೇ!

ನಿದ್ರಾ ರೋಗಿಯ ಈ ಸೋಜಿಗ ವೈದ್ಯರನ್ನು ಕಕ್ಕಾಬಿಕ್ಕಿಯನ್ನಾಗಿಸಿದೆ. ಲೀ ಜಿಮಿಂಗ್ ಎಂಬ 74 ವರ್ಷದ ವೃದ್ಧನೇ ಈ ಕಥೆಯ ನಾಯಕ ಮತ್ತು ಅವನನ್ನು ನೋಡಿಕೊಳ್ಳುತ್ತಿರುವ ಕುಟುಂಬದ ಖಳನಾಯಕ ಎರಡೂ ಆಗಿದ್ದಾನೆ.

ಒಮ್ಮೆ ಮಲಗಿಕೊಂಡನೆಂದರೆ ಜಪ್ಪಯ್ಯ ಅಂದರೂ ಕಣ್ಣು ಬಿಡುವುದಿಲ್ಲ. ತಾಳ, ಜಾಗಟೆ, ಡೋಲು, ತುತ್ತೂರಿ ಏನೇ ಬಾರಿಸಲಿ, ಸೊಳ್ಳೆಗಳು ಬಂದು ಕಿವಿಯಲ್ಲಿ ಗುಂಯ್ ಅಂದರೂ ಲೀ ಏಳುವುದಿಲ್ಲ. ರಾಮಾಯಣದಲ್ಲಿ ಬರುವ ಲಂಕಾದ ಕುಂಭಕರ್ಣ ನಗಾರಿ ಬಾರಿಸಿ, ಭರ್ಚಿಗಳಿಂದ ತಿವಿದರೆ ಎದ್ದಾದರೂ ಏಳುತ್ತಿದ್ದ, ಆದರೆ ಈಯಪ್ಪ ಊಹುಂ. ದೈಹಿಕವಾಗಿ ಸಂಭವಿಸುವ ಎಲ್ಲ ಸ್ವಾಭಾವಿಕ ಕ್ರಿಯೆಗಳಿಗೂ ಮನೆಯವರೇ ಸ್ಪಂದಿಸಬೇಕು. ಆರು ತಿಂಗಳುಗಳ ಕಾಲ ನ್ಯಾಪಿ ಪ್ಯಾಡ್ ಹಾಕಿ ತೆಗೆದು ಹಾಕಿ ತೆಗೆದು ಮನೆಯವರು ಬೇಸತ್ತು ಹೋಗಿದ್ದಾರೆ.

ಆತನನ್ನು ಹಿಡಿದೆತ್ತಿ ಕೂಡಿಸಿ, ಕಣ್ಣು ಮುಚ್ಚಿದ ಭಂಗಿಯಲ್ಲಿಯೇ ಬಾಯಲ್ಲಿ ಸೂಪು, ಆಹಾರಗಳನ್ನು ತುರುಕಿದರೆ ಎಲ್ಲರಂತೆ ಸಹಜವಾಗಿ ಗುಳುಂಗುಳುಂ. ಇಷ್ಟೆಲ್ಲ ವೈಚಿತ್ರ್ಯಗಳಿದ್ದರೂ ಈತ ಆರೋಗ್ಯಕರವಾಗಿಯೇ ಇದ್ದಾನೆ. ಮಲಗಿದಾಗ ಕೋಮಾದಲ್ಲಿರುವ ವ್ಯಕ್ತಿಯಂತೆ ಕಂಡುಬರುತ್ತಾನೆ. ಆದರೆ, ಕಣ್ಣು ಬಿಟ್ಟನೆಂದರೆ ಹಗಲು-ಇರುಳಿನ ವ್ಯತ್ಯಾಸವೇ ಇಲ್ಲದಂತೆ ಅಡ್ಡಾಡಿಕೊಂಡಿರುತ್ತಾನೆ ಅಥವಾ ಟಿವಿ ನೋಡಿಕೊಂಡು ಕಾಲ ದೂಡುತ್ತಾನೆ.

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X