ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿವ್-ಇನ್ ಮಹಿಳೆಗೆ ಜೀವನಾಂಶ?

By Mahesh
|
Google Oneindia Kannada News

SC to look at maintenance for live-in partners
ನವದೆಹಲಿ, ಆ.4: ಲಿವ್-ಇನ್ (ವೈವಾಹಿಕ ಬಂಧನಕ್ಕೊಳಗಾಗದ) ಸಂಬಂಧದಲ್ಲಿನ ಮಹಿಳೆಯು ಯಾವುದೇ ಭದ್ರತೆಯಿಲ್ಲದೆ ಬೀದಿಗೆ ಬೀಳುವಂತಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸರ್ವೋಚ್ಛ ನ್ಯಾಯಾಲಯವು, ಆಕೆ ತಾನು ಇಂತಹ ಸಂಬಂಧ ಹೊಂದಿದ್ದ ಪುರುಷನಿಂದ ಜೀವನಾಂಶ ಕೇಳಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸಲು ನಿರ್ಧರಿಸಿದೆ.

ಸಮಾಜದಲ್ಲಿ ಬದಲಾವಣೆಗಳೊಂದಿಗೆ ಈ ವಿಷಯದಲ್ಲಿ ಕಾನೂನಿನ ದೃಷ್ಟಿಯಿಂದ ವ್ಯಾಪಕ ಪರಿಶೀಲನೆ ನಡೆಸಬೇಕಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನೊಳಗೊಂಡ ಪೀಠ, ಸಮಾಜದಲ್ಲಿ ಲಿವ್-ಇನ್ ಸಂಬಂಧಗಳು ಹೆಚ್ಚುತ್ತಿವೆ. ಕಾಲದ ಬದಲಾವಣೆಯೊಂದಿಗೆ ಲಿವ್-ಇನ್ ಸಂಬಂಧವನ್ನು ಈಗ ಸಾಮಾಜಿಕವಾಗಿ ಒಪ್ಪಿಕೊಳ್ಳಲಾಗಿರುವುದು ಅನಿವಾರ್ಯ.

ಇಂತಹ ಸಂಬಂಧದಲ್ಲಿಯ ಮಹಿಳೆ ಯಾವುದೇ ಭದ್ರತೆಯಿಲ್ಲದೆ ಆಕೆಯನ್ನು ತೊರೆಯುವಂತಾಗಬಾರದು ಎಂದು ಹೇಳಿತು. ಈ ವಿಷಯದಲ್ಲಿ ತನಗೆ ನೆರವಾಗಲು ಅಲ್ತಾಫ್ ಅಹ್ಮದ್ ಮತ್ತು ಪಿ.ಎಸ್. ಪಟ್ವಾಲಿಯಾ ಹಾಗೂ ಶಿಬು ಶಂಕರ ಮಿಶ್ರಾ ಅವರನ್ನು ನೇಮಕಗೊಳಿಸಿದ ನ್ಯಾಯಾಲಯವು, ಆರು ವಾರಗಳಲ್ಲಿ ತಮ್ಮ ಸಲಹೆಗಳನ್ನು ನೀಡುವಂತೆ ಸೂಚಿಸಿತು.

ಕೇರಳ ಮೂಲದ ವ್ಯಕ್ತಿಯೊಬ್ಬ ಲಿವ್ ಇನ್ ಸಂಬಂಧದಲ್ಲಿದ್ದ ತನ್ನ ಮಾಜಿ ಸಹವರ್ತಿಗೆ ಜೀವನಾಂಶ ನೀಡುವ ಬಗ್ಗೆ ಅಲ್ಲಿನ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾನೆ. ಅಪರಾಧಿ ಪ್ರಕ್ರಿಯೆ ಸಂಹಿತೆ ಸೆಕ್ಷನ್ 125 ರ ಅನ್ವಯ ಸ್ಥಿತಿವಂತ ವ್ಯಕ್ತಿಯು ತನ್ನ ಪತ್ನಿಗೆ ಜೀವನಾಂಶ ನೀಡಲೇಬೇಕಾಗುತ್ತದೆ.

ಆದರೆ, ಕೇರಳದ ವ್ಯಕ್ತಿ ತಾನು ಮದುವೆ ಆಗಿರಲಿಲ್ಲ. ನಾವಿಬ್ಬರು ಲಿವ್ ಇನ್ ಸಂಬಂಧದಲ್ಲಿದ್ದೆವು ಎಂದಿದ್ದಾನೆ. ಆಲ್ಲದೆ, ಹೆಚ್ಚು ವರ್ಷಗಳ ಕಾಲ ಲಿವ್ ಇನ್ ಸಂಬಂಧದಲ್ಲಿರುವವರನ್ನು ವಿವಾಹಿತರಂತೆ ಕಾಣಲು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X