ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಐಡಿಗಳಿಗೆ ಸಿಕ್ತು ಸಂಚಾರಿ ಸೈಬರ್ ಲ್ಯಾಬ್

By Mahesh
|
Google Oneindia Kannada News

CID office, Bangalore
ಬೆಂಗಳೂರು, ಜು.28: ರಾಜ್ಯದ ಬಹುದಿನಗಳ ಬೇಡಿಕೆ ಕೊನೆಗೂ ನೆರವೇರಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪ್ರತ್ಯೇಕ ಮೊಬೈಲ್ ಸೈಬರ್ ಪ್ರಯೋಗಾಲಯವನ್ನು ಸ್ವಾತಂತ್ರ್ಯೋತ್ಸವ ದಿನದಂದು ನಾಡಿಗೆ ಅರ್ಪಿಸಲಾಗುವುದು ಎಂದು ಡಿಜಿಪಿ ಡಿವಿ ಗುರುಪ್ರಸಾದ್ (ಸಿಐಡಿ ವಿಭಾಗ) ಹೇಳಿದರು.

ಸುಮಾರು 30 ಲಕ್ಷ ವೆಚ್ಚದ ಈ ಅತ್ಯಾಧುನಿಕ ಸೈಬರ್ ಪ್ರಯೋಗಾಲಯವನ್ನು ನಗರದ ಸಿಐಡಿ ಆವರಣದಲ್ಲೇ ಸ್ಥಾಪಿಸಲಾಗುತ್ತಿದ್ದು, ಪ್ರಕರಣಗಳ ತನಿಖೆಯನ್ನು ಚುರುಕಾಗಿ ಪೂರೈಸಲು ಸಹಕಾರಿಯಾಗಲಿದೆ.

ಸೈಬರ್ ಕ್ರೈಂ ತನಿಖಾದಳದ ತಜ್ಞರ ನೆರವಿಗಾಗಿ ಈ ಸಂಚಾರಿ ಸೈಬರ್ ಪ್ರಯೋಗಾಲಯ ನಾಡಿನ ಉದ್ದಕ್ಕೂ ಚಲಿಸಲಿದೆ. ಈ ವಾಹನದಲ್ಲಿ ಇಬ್ಬರು ನುರಿತ ಇನ್ಸ್ ಪೆಕ್ಟರ್ ಗಳಿರುತ್ತಾರೆ. ಆಧುನಿಕ ತಂತ್ರಜ್ಞಾನದ ಬಗ್ಗೆ ಇವರಿಗೆ ಅಮೆರಿಕದಲ್ಲಿ ತರಬೇತಿ ನೀಡಲಾಗಿದೆ ಎಂದು ಗುರುಪ್ರಸಾದ್ ಹೇಳಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹಾಗೂ ಮೈಕ್ರೋ ಬ್ಲಾಗಿಂಗ್ ತಾಣ ಟ್ವೀಟ್ಟರ್ ಲೋಕಕ್ಕೆ ಕಾಲಿಟ್ಟಿರುವ ಸಿಐಡಿ ಪೊಲೀಸರು, ಹೊಸ ತಂತ್ರಜ್ಞಾನ ಬಳಕೆ ಬಗ್ಗೆ ಆಸಕ್ತರಾಗಿದ್ದು, ಬೆದರಿಕೆ ಕರೆ, ಅಸಭ್ಯ ಸಂದೇಶ ಕಳಿಸುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಉತ್ಸುಕರಾಗಿದ್ದಾರೆ.

ಸಿಐಡಿಯ ಫೇಸ್ ಬುಕ್ ಐಡಿ 'helpcidkarnataka' ಅಥವಾ D Guruprasad ಫಾಲೋ ಮಾಡಬಹುದು. ಹಾಗೆಯೇ ಟ್ವಿಟ್ಟರ್.ಕಾಂನಲ್ಲಿ @DGPCIDKARNATAKA ಹಿಂಬಾಲಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X