ಕಾಮಾಟಿಪುರದ ಕೊಂಪೆಯಿಂದ ಮರಳಿದ ಯುವತಿ
ಕೋಲಾರ,
ಜು. 24 : ಮುಂಬೈಯ ಕಾಮಾಟಿಪುರ ಜಾಲ ಕೋಲಾರ ಜಿಲ್ಲೆಯಲ್ಲೂ ಸಕ್ರಿಯವಾಗಿರುವ ಸಂಗತಿ ಹೊರಬಿದ್ದಿದೆ. ವೈಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ತಾಲ್ಲೂಕಿನ ಶಿಂಗೂಂಡಹಳ್ಳಿ ಯುವತಿಯನ್ನು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. id="toptextpromo">ಕಳೆದ
ಮಾರ್ಚ್ ನಲ್ಲಿ 19 ವರ್ಷದ ಯುವತಿ ಕಾಣೆಯಾಗಿರುವ ಕುರಿತು ಆಕೆಯ ಪೋಷಕರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರಿಗೆ ಬಾತ್ಮಿದಾರನೊಬ್ಬ ಮಾಹಿತಿ ನೀಡಿ ಕಾಣೆಯಾಗಿರುವ ಯುವತಿ ಮುಂಬೈನ ಕಾಮಾಟಿಪುರ ಸೇರಿದ್ದಾಳೆಂದು ಖಚಿತಪಡಿಸಿದ್ದ. id='are-slot-1' class='oiad oi-axt oiadv'> id='top-searched-articles'>ಮಾಹಿತಿಯ
ಜಾಡು ಹಿಡಿದು ಕಾರ್ಯಾಚರಣೆ ಮುಂದುವರೆಸಿದ್ದ ಠಾಣೆ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಮುಂಬೈಗೆ ತೆರಳಿ ಕಾಮಾಟಿಪುರದ ಮಾಲೀಕರ ವಿರೋಧದ ನಡುವೆಯೂ ಶಿಂಗೊಂಡಹಳ್ಳಿಯ ಯುವತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಇದೇ ಜಿಲ್ಲೆಯ ಅನೇಕ ಠಾಣೆಯಲ್ಲಿ ಯುವತಿಯ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.











Click it and Unblock the Notifications