ಪಾದಕ್ಕೆ ನಮಸ್ಕರಿಸಿ ಜೀತದಾಳಾಗುವೆ : ಉಗ್ರಪ್ಪ

ನಾನು ಗಣಿ ಉದ್ಯಮಿಗಳ ಏಜೆಂಟ್ ಎಂದು ಸಚಿವರಾಜ ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು, ಸಿ ಎಂ ಉದಾಸಿ ಮತ್ತು ಬಿಜೆಪಿ ವಕ್ತಾರ ಧನಂಜಯಕುಮಾರ ಆರೋಪಿಸಿದ್ದಾರೆ. ಅದನ್ನು ಅವರು ಸಾಬೀತುಪಡಿಸಬೇಕು, ಇಲ್ಲವಾದಲ್ಲಿ ಕ್ಷಮೆಯಾಚಿಸಬೇಕು ಎಂದು ಉಗ್ರಪ್ಪ ಕಿಡಿಕಾರಿದ್ದಾರೆ.
ಗಣಿ ಹಣದಲ್ಲಿ ನಾನು ಮನೆ ಕಟ್ಟಿಸಿದ್ದೇನೆ ಎಂದು ಸಚಿವರು ಆರೋಪಿಸಿದ್ದಾರೆ. ಮನೆ ಕಟ್ಟಿಸಲು ಬ್ಯಾಂಕಿನಲ್ಲಿ 80 ಲಕ್ಷ ರುಪಾಯಿ ಸಾಲ ಹಾಗೂ ಮಿತ್ರರಿಂದ 1 ಕೋಟಿ ರುಪಾಯಿ ಸಾಲ ಪಡೆದುಕೊಂಡಿದ್ದೇನೆ. ಆ ಸಾಲವನ್ನು ಆರೋಪ ಮಾಡಿರುವ ಮುಖಂಡರು ತೀರಿಸುವುದಾದರೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಬಚ್ಚೇಗೌಡರ ರಾಜಕೀಯ ಇತಿಹಾಸ ನನಗೆ ಗೊತ್ತಿದೆ. ಹೊಸಕೋಟೆ ತಾಲ್ಲೂಕಿನ ನಂದಗುಡಿ ಬಳಿ ಅವರಿಗೆ ನೂರಾರು ಎಕರೆ ಜಮೀನು ಹೇಗೆ ಬಂತು. ರಿಯಲ್ ಎಸ್ಟೇಟ್ ದಂಧೆಯಲ್ಲಿ ನಾಯ್ಡು ಪಾತ್ರವೇನು ? ಲೋಕೋಪಯೋಗಿ ಇಲಾಖೆಗೆಯಲ್ಲಿ ಗುತ್ತಿಗೆದಾರರು ಹಣ ಪಡೆಯಲು ಉದಾಸಿಗೆ ಎಷ್ಟೆಷ್ಟು ಲಂಚ ಕೊಡಬೇಕು ಹಾಗೂ ಧನಂಜಯಕುಮಾರ ಎನ್ ಡಿಎ ಸರಕಾರವಿದ್ದಾಗ ಆಡಿದ ಚೆಲ್ಲಾಟವೇನು? ಯಾತಕ್ಕಾಗಿ ಅವರು ಮಂತ್ರಿ ಪದವಿ ಕಳೆದುಕೊಳ್ಳಬೇಕಾಯಿತು ಎಂಬುದು ಗೊತ್ತಿದೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications