ಜಸ್ವಂತ್ ಸಿಂಗ್ ಓಕೆ, ವೈ ನಾಟ್ ಉಮಾ
ನವದೆಹಲಿ,
ಜು. 20 : ಪಕ್ಷಕ್ಕೆ ಜಸ್ವಂತ್ ಸಿಂಗ್ ಅವರನ್ನು ಮಾತ್ರ ಪುನರ್ ಸೇರ್ಪಡೆ ಮಾಡಿಕೊಂಡಿರುವ ಮತ್ತು ಉಮಾಭಾರತಿ ಮತ್ತು ಗೋವಿಂದಾಚಾರ್ಯ ಅವರನ್ನು ಸೇರಿಸಿಕೊಳ್ಳದಿರುವ ಬಿಜೆಪಿ ನಿರ್ಧಾರವನ್ನು ಆರ್ಎಸ್ಎಸ್ ಹಿರಿಯ ನಾಯಕ ಎಂ ಜಿ ವೈದ್ಯ ಪ್ರಶ್ನಿಸಿದ್ದಾರೆ. id="toptextpromo">ಜಸ್ವಂತ್
ಸಿಂಗ್ ಅವರನ್ನು ಮಾತ್ರ ಏಕೆ ಬಿಜೆಪಿ ಸೇರ್ಪಡೆ ಮಾಡಿಕೊಂಡಿದೆ. ಗೋವಿಂದಾಚಾರ್ಯ, ಉಮಾಭಾರತಿ ಹಾಗೂ ಸಂಜಯ್ ಜೋಶಿ ಏಕೆ ಪುನಃ ಬಿಜೆಪಿಗೆ ಸೇರಿಸಿಕೊಳ್ಳುತ್ತಿಲ್ಲ. ಈ ಮೂವರು ಸಣ್ಣ ತಪ್ಪು ಮಾಡಿರಬಹುದುಯ ಆದರೆ, ಇವರು ಜಿನ್ನಾ ಅವರನ್ನು ಹೊಗಳಿದ ಅಡ್ವಾಣಿಯವರಷ್ಟು ದೊಡ್ಡ ತಪ್ಪನ್ನು ಮಾಡಿಲ್ಲ ಎಂದು ಮರಾಠಿ ಪತ್ರಿಕೆಗೆ ಅವರು ಸೋಮವಾರ ಲೇಖನ ಬರೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಸ್ವಂತ್
ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಏನೂ ಆಗುವುದಿಲ್ಲ. ಆದರೆ, ಉಮಾ, ಗೋವಿಂದಾಚಾರ್ಯ ಹಾಗೂ ಜೋಶಿ ಸೇರ್ಪಡೆಯಿಂದ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ ಎಂದು ವೈದ್ಯ ಪ್ರತಿಪಾದಿಸಿದ್ದಾರೆ. ಜಿನ್ನಾ ಅವರನ್ನು ಜಾತ್ಯಾತೀತ ಎಂದು ಬಣ್ಣಿಸಿರುವ ಅಡ್ವಾಣಿ ಅವರ ಮಾತನ್ನು ಯಾವ ಕಾರಣಕ್ಕೂ ಒಪ್ಪಲಾಗದು ಎಂದು ವೈದ್ಯ ಬರೆದಿದ್ದಾರೆ.











Click it and Unblock the Notifications