ಆಂಗ್ಲ ದೈನಿಕ ಹಿಂದು ಹುಬ್ಬಳ್ಳಿ ಆವೃತ್ತಿ ಆರಂಭ

ಈಗಾಗಲೆ ಹಿಂದು ಪತ್ರಿಕೆ ಚೆನ್ನೈ, ಕೊಯಂಬತ್ತೂರು, ಬೆಂಗಳೂರು, ಹೈದರಾಬಾದ್, ಮದುರೈ, ನವ ದೆಹಲಿ, ವಿಶಾಖಪಟ್ಟಣ, ತಿರುವನಂತಪುರಂ, ಕೊಚ್ಚಿ, ವಿಜಯವಾಡ, ಮಂಗಳೂರು, ತಿರುಚಿರಾಪಲ್ಲಿ ಹಾಗೂ ಕೋಲ್ಕತ್ತಾಗಳಲ್ಲಿ ಆವೃತ್ತಿಗಳನ್ನು ಹೊಂದಿದೆ.
ಹುಬ್ಬಳ್ಳಿ ಆವೃತ್ತಿಯು ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗದಗ, ಬಿಜಾಪುರ, ಬಾಗಲಕೋಟೆ ಸೇರಿದಂತೆ ಗೋವಾ ಮತ್ತು ಕೊಲ್ಲಾಪುರ, ಪುಣೆ, ಸೋಲಾಪುರ ಕೇಂದ್ರಗಳ ಸುದ್ದಿಗಳನ್ನು ಹೊತ್ತು ತರಲಿದೆ.
1878ರಲ್ಲಿ ಸಾಪ್ತಾಹಿಕ ಪತ್ರಿಕೆಯಾಗಿ ಆರಂಭವಾದ ಹಿಂದು ಬಳಿಕ 1889 ರಲ್ಲಿ ದೈನಿಕ ಪತ್ರಿಕೆಯಾಗಿ ಬದಲಾಯಿತು. ಎಬಿಸಿ ಸಂಸ್ಥೆಯ ಪ್ರಕಾರ ಜುಲೈ-ಡಿಸೆಂಬರ್ 2009ರಲ್ಲಿ 1,466,304 ಪ್ರಸಾರ ಸಂಖ್ಯೆಯನ್ನು ಹಿಂದು ಪತ್ರಿಕೆ ಹೊಂದಿದೆ. ಹಿಂದು ಓದುಗರ ಸಂಖ್ಯೆ 4.06 ದಶಲಕ್ಷದಷ್ಟಿದೆ.












Click it and Unblock the Notifications