ಅಧಿಕೃತವಾಗಿ ಬೇರ್ಪಟ್ಟ ಮಹೇಶ್ ಭೂಪತಿ, ಶ್ವೇತಾ
ಮುಂಬೈ,
ಜು.16: ಖ್ಯಾತ ಟೆನ್ನಿಸ್ ತಾರೆ ಮಹೇಶ್ ಭೂಪತಿ ಹಾಗೂ ರೂಪದರ್ಶಿ ಶ್ವೇತಾ ಜೈಶಂಕರ್ ದಂಪತಿಗಳು ಅಧಿಕೃತವಾಗಿ ಬೇರ್ಪಟ್ಟಿದ್ದು, ಅವರ ವಿಚ್ಛೇದನಕ್ಕೆ ಬಾಂದ್ರಾ ಕುಟುಂಬ ನ್ಯಾಯಾಲಯ ಅಧಿಕೃತ ಒಪ್ಪಿಗೆ ಮುದ್ರೆ ಹಾಕಿದೆ. id="toptextpromo">ಮಹೇಶ್
ಹಾಗೂ ಶ್ವೇತಾ ವಿಚ್ಛೇದನ ಕೋರಿ ಕಳೆದ ವರ್ಷವೇ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬಾಂದ್ರಾ ಕುಟುಂಬ ನ್ಯಾಯಲಯ ಪರಸ್ಪರ ಒಪ್ಪಿಗೆ ಇರುವುದು ಕಂಡ ಬಂದ ನಂತರ ಗುರುವಾರ ಆದೇಶ ಹೊರಡಿಸಿತು ಎಂದು ಫ್ಯಾಮಿಲಿ ಕೋರ್ಟ್ ನ ಹಿರಿಯ ಸಲಹೆಗಾರ್ತಿ ಮೃಣಾಲಿನಿ ದೇಶ್ ಮುಖ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಅಕ್ಟೋಬರ್
2009ರಲ್ಲಿ ಶ್ವೇತಾರನ್ನು ಮದುವೆಯಾಗಿದ್ದ ಟೆನ್ನಿಸ್ ಪಟು ಮಹೇಶ್ ಭೂಪತಿ, ವಿವಾಹ ವಿಚ್ಛೇದನವನ್ನು ಬಯಸಿದ್ದರು. ಆದರೆ, ಪರಸ್ಪರ ಒಪ್ಪಿಗೆ ಸಿಗದೇ ಕೇಸ್ ವಿಳಂಬವಾಗಿತ್ತು. ಮಹೇಶ್ ಭೂಪತಿ ಹೆಸರು ನಟಿ ಲಾರಾ ದತ್ತಾರ
ಜೊತೆ
ಓಡಾಡುತ್ತಲಿದೆ.












Click it and Unblock the Notifications