ಅಲ್ಪಸಂಖ್ಯಾತರ ಹೊಟ್ಟೆಗೆ ಹೊಡೆದ ಸರ್ಕಾರ: ಮೋಟಮ್ಮ

ರಾಜ್ಯದಲ್ಲಿ ನಡೆಯುತ್ತಿರುವ ಗಣಿ ಲೂಟಿ ತಡೆದು ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕೆಲಸ ಮಾಡುವ ಬದಲಿಗೆಜನರಿಗೆ ಬೇಡವಾದ ವಿಧೇಯಕ ಜಾರಿಗೆ ತಂದಿದೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಗೋಹತ್ಯೆ ನಿಷೇಧ ಕಾಯಿದೆಯಿಂದ ಸಮಾಜ ಒಡೆದು ಚೂರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹಿಂದುತ್ವದ ಹಿಡನ್ ಅಜೆಂಡಾವನ್ನು ಬಿಜೆಪಿ ಸರ್ಕಾರ ಈ ಕಾಯಿದೆ ಮೂಲಕ ಜಾರಿಗೆ ತಂದಿದೆ. ಅಲ್ಪಸಂಖ್ಯಾತರ ಆಹಾರವನ್ನು ಕಸಿದುಕೊಂಡಿದೆ ಎಂದು ಹೇಳಿದರು.
ನಾಡಿನ ಸಾಹಿತಿಗಳು, ಬುದ್ಧಿಜೀವಿಗಳು ಗೋಹತ್ಯೆ ನಿಷೇಧ ಕಾಯಿದೆಗೆ ವಿರೋಧ ವ್ಯಕ್ತಪಡಿಸಿದ್ದರೂ ಇದಾವುದನ್ನೂ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಈ ಕರಾಳ ಕಾಯಿದೆ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು, ಈ ಕಾಯಿದೆ ವಿರೋಧಿಸಿ ಮುಂದಿನ ಹೋರಾಟದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.












Click it and Unblock the Notifications