ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಂಗಳಿಗೊಮ್ಮೆ ಇಂಧನ ಬೆಲೆ ಪರಿಷ್ಕರಣೆ?

By Mahesh
|
Google Oneindia Kannada News

PSU Oil Firms To Charge Uniform Petrol Price
ನವದೆಹಲಿ, ಜು.15: ಪೆಟ್ರೋಲ್ ಮೇಲಿನ ಸರ್ಕಾರಿ ನಿಯಂತ್ರಣವನ್ನು ತೆಗೆದು ಹಾಕಿದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಬೆಲೆಯನ್ನು ನಿಗದಿ ಪಡಿಸಲು ಸೂಕ್ತ ವಿಧಾನವನ್ನು ಅಳವಡಿಸಿಕೊಳ್ಳಲು ತೈಲ ಮಾರಾಟ ಕಂಪೆನಿಗಳು ಚರ್ಚೆ ನಡೆಸಿ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿವೆ. ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡುವ ಸಾಧ್ಯತೆಯಿದ್ದು, ಇಂಧನ ಬೆಲೆ ಏರಿಕೆ ಹೊಡೆತವನ್ನು ಶ್ರೀ ಸಾಮಾನ್ಯ ಅನುಭವಿಸಬೇಕಾಗುತ್ತದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್(IOC), ಭಾರತ್ ಪೆಟ್ರೋಲಿಯಮ್(BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ(HPCL) ಗಳು ತಿಂಗಳಿಗೊಮ್ಮೆ ಸಭೆ ಸೇರಿ ಬೆಲೆ ಪರಿಷ್ಕರಣೆ ಮಾಡಲಿದ್ದು, ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಗನುಗುಣವಾಗಿ ಬೆಲೆಯನ್ನು ನಿಗದಿ ಪಡಿಸಲಾಗುವುದು ಎಂದು ಐಒಸಿ ವಾಣಿಜ್ಯ ವಿಭಾಗದ ನಿರ್ದೇಶಕ ಎಸ್ ವಿ ನರಸಿಂಹನ್ ಹೇಳಿದ್ದಾರೆ. ಮೂರು ಕಂಪೆನಿಗಳು ಸಮಾನ ಬೆಲೆ ನಿಗದಿ ಪಡಿಸಲಿದೆ ಎನ್ನಲಾಗಿದೆ.

ಎಷ್ಟು ದಿನಗಳಿಗೊಮ್ಮೆ ಮಾರುಕಟ್ಟೆ ದರಗಳಿಗನುಗುಣವಾಗಿ ದರ ಪರಿಷ್ಕರಣೆ ಮಾಡಬೇಕೆಂದು ಕಂಪೆನಿಗಳು ಈ ವಾರ ನಿರ್ಧರಿಸಲಿವೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಎಸ್ ಸುಂದರೇಷನ್ ಹೇಳಿದ್ದರು. ಇಂಡಿಯನ್ ಆಯಿಲ್ ಅದ್ಯಕ್ಷ ಬಿಎಮ್ ಬನ್ಸಾಲ್ ಅವರು ಬೆಲೆ ನಿಗದಿ ಅವಧಿ ಪರಿಷ್ಕರಣೆ ಕುರಿತು ಇತರ ಕಂಪೆನಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X