ಮಲ್ಯರ ಫೋರ್ಸ್ ಇಂಡಿಯಾಗೆ ದೀಪಿಕಾ ಬಲ

ಸಿಲ್ವರ್ ಸ್ಟೋನ್ , ಜು.15: ಫೋರ್ಸ್ ಇಂಡಿಯಾ, ಫಾರ್ಮೂಲಾ ಒನ್ ಕಾರುಗಳ ರೇಸ್ ನಲ್ಲಿ ಭಾರತದ ತಂಡ. ಮದ್ಯದ ದೊರೆ ವಿಜಯ್ ಮಲ್ಯರ ನೆಚ್ಚಿನ ಕ್ರೀಡೆಗಳಲ್ಲಿ ಎಫ್1 ರೇಸ್ ಕೂಡಾ ಒಂದು.

ಮಲ್ಯರ ಎಫ್1 ತಂಡ ರೇಸ್ ನಿಂದ ರೇಸ್ ಗೆ ಉತ್ತಮ ಸಾಧನೆ ತೋರುತ್ತಿರುವ ಬೆನ್ನಲ್ಲೇ, ಎಫ್ 1 ತಂಡಕ್ಕೆ ಒಂದಿಷ್ಟು ಗ್ಲಾಮರ್ ತುಂಬಲು ತಮ್ಮ ನೆಚ್ಚಿನ ರೂಪದರ್ಶಿ ನಟಿ ದೀಪಿಕಾ ಪಡುಕೋಣೆ ಅವರನ್ನು ಕರೆತಂದಿದ್ದಾರೆ.

ಸಿಲ್ವರ್ ಸ್ಟೋನ್ ನಲ್ಲಿ ನಡೆಯಲಿರುವ ಬ್ರಿಟಿಷ್ ಗ್ರಾಂಡ್ ಪ್ರೀಯಲ್ಲಿ ಫೋರ್ಸ್ ಇಂಡಿಯಾದ ಚಾಲಕರಾದ ಆಂಡ್ರಿಯನ್ ಸುಟಿಲ್ ಹಾಗೂ ಟೊನಿಯೊ ಲುಜ್ಜಿ ಅವರನ್ನು ಹುರಿದುಂಬಿಸಿದ್ದಾರೆ ದೀಪಿಕಾ. ಅರ್ಹತಾ ಸುತ್ತಿನಲ್ಲಿ ಉತ್ತಮ ಸಾಧನೆ ತೋರಿರುವ ಸುಟಿಲ್ ಜು.11ರ ರೇಸ್ ಡೇ ದಿನ ಅಂಕಗಳನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.

ರೇಸ್ ಆರಂಭಿಸುವ ಗ್ರಿಡ್ ನಲ್ಲಿ ಸುಟಿಲ್ 11 ನೇ ಸ್ಥಾನ ಹಾಗೂ ಲುಜ್ಜಿ 15 ನೇ ಸ್ಥಾನದಲ್ಲಿದ್ದರು. 52 ಸುತ್ತಿನ ಈ ರೇಸ್ ನಲ್ಲಿ ಕೊನೆಗೆ ಸುಟಿಲ್ 8 ನೇ ಸ್ಥಾನ ಪಡೆದು ಅಂಕ ಗಳಿಸಿದರೆ, ಲುಜ್ಜಿ 11 ನೇ ಸ್ಥಾನ ಪಡೆದು ಅಂಕ ಪಡೆಯುವಲ್ಲಿ ವಿಫಲರಾದರು.

ಆಸ್ಟ್ರೇಲಿಯಾದ ಮಾರ್ಕ್ ವೆಬ್ಬರ್ ರೇಸ್ ಅನ್ನು ಗೆದ್ದರು.47 ಅಂಕಗಳೊಡನೆ ಫೋರ್ಸ್ ಇಂಡಿಯಾ ಕಂಸ್ಟ್ರಕ್ಟರ್ ಅಂಕಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ. 35 ಅಂಕಗಳೊಡನೆ ಸುಟಿಲ್ ಚಾಲಕರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.

ಇತ್ತ ಮಲ್ಯ ಅವರು ಎಫ್ 1 ತಂಡ ರೂಪಿಸಿದಾಗಿನಿಂದ ಪ್ರತಿ ರೇಸ್ ಗಳನ್ನು ಹಿಂಬಾಲಿಸುತ್ತಿರುವ ದೀಪಿಕಾ, ರೇಸ್ ಸರ್ಕ್ಯೂಟ್ ಗೆ ಬರಲಾಗದಿದ್ದರೂ, ಸದಾ ನನ್ನ ಹಾರೈಕೆ ಇದ್ದೇ ಇರುತ್ತದೆ ಎನ್ನುತ್ತಾರೆ.

ಮಲ್ಯರ ಕ್ರಿಕೆಟ್ ತಂಡ ಆರ್ ಸಿಬಿಗೆ ರಾಯಭಾರಿಯಾಗಿದ್ದ ದೀಪಿಕಾ, ಅದಕ್ಕೂ ಮುನ್ನ ತಮ್ಮ ರೂಪದರ್ಶಿ ಜೀವನದ ಆರಂಭದಲ್ಲಿ ಕಿಂಗ್ ಫಿಷರ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡು ಸೂಪರ್ ಮಾಡೆಲ್ ಪಟ್ಟ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+