22ರ ತಥಾಗತ್ ಬಾಂಬೆ ಐಐಟಿ ಪ್ರೊಫೆಸರ್
ಮುಂಬೈ,
ಜು. 14 : ಅತಿ ಚಿಕ್ಕ ವಯಸ್ಸಿನಲ್ಲೇ ಪದವಿ, ಸಂಶೋಧನೆ, ಡಾಕ್ಟರೇಟ್ ಎಲ್ಲವನ್ನೂ ಪಡೆದಿರುವ ಪಾಟ್ನಾದ 22 ಹರೆಯದ ತಥಾಗತ್ ಅವತಾರ್ ತುಳಿಸಿ ಮುಂಬೈನ ಐಐಟಿಯ ಕಾಲೇಜಿನ ಸಹಾಯಕ ಪ್ರೊಫಸರ್ ಆಗಿ ನೇಮಕಗೊಂಡಿದ್ದಾರೆ. id="toptextpromo">ಬೆಂಗಳೂರಿನ
ಭಾರತೀಯ ವಿಜ್ಞಾನ ಮಂದಿರದ ಐಐಎಸ್ ಸಿಯಲ್ಲಿ ಕ್ವಾಂಟಮ್ ಕಂಪ್ಯೂಟರ್ ವಿಷಯದಲ್ಲಿ ಡಾಕ್ಟರೇಟ್ ಕೂಡ ಪಡೆದಿರುವ ಡಾ ತಥಾಗತ್ ತುಳಿಸಿ ಐಐಟಿ ಬಾಂಬೆಯಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸೇರಿಕೊಳ್ಳಲಿದ್ದಾರೆ. ಈ ಸಂಬಂಧ ಜೂನ್ 30 ರಂದು ಅವರಿಗೆ ಪ್ರಮಾಣ ಪತ್ರ ನೀಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ತಥಾಗತ್
9ನೇ ವಯಸ್ಸಿನಲ್ಲಿ ಎಸ್ಎಸ್ಎಲ್ ಸಿ, 10 ವಯಸ್ಸಿಗೆ ಬಿಎಸ್ಸಿ, 12 ರಲ್ಲಿ ಎಂಎಸ್ಸಿ ಹಾಗೂ 21 ವಯಸ್ಸಿಗೆ ಡಾಕ್ಟರೇಟ್ ಪದವಿಯನ್ನು ಸಂಪಾದಿಸಿದ್ದಾರೆ. ಈ ಪ್ರತಿಭಾವಂತನನ್ನು ಸೆಳೆಯಲು ವಿದೇಶಿ ವಿಶ್ವವಿದ್ಯಾಲಯಗಳು ಬಲೆ ಬೀಸಿದ್ದವು. ಆದರೆ ಇದನ್ನು ನಯವಾಗಿ ತಿರಸ್ಕಿರಿಸಿದ ತಥಾಗತ್ ವಿದೇಶಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.











Click it and Unblock the Notifications