ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಎನ್ನಾರೈಗಳಿಗೆ ಮತದಾನ ಹಕ್ಕು: ಮೊಯ್ಲಿ

By Mahesh
|
Google Oneindia Kannada News

Veerappa Moily
ಲಂಡನ್, ಜು.12: ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕುಗಳನ್ನು ನೀಡುವ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಒಲವು ತೋರಿದ ಬೆನ್ನಲ್ಲೇ, ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಅದನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಲ್ಲಿ ತಿಳಿಸಿದರು.

ಸಾಗರೋತ್ತರ ಭಾರತೀಯರ ಕಾಂಗ್ರೆಸ್ (ಬ್ರಿಟನ್) ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, ಎನ್ಆರ್ಐಗಳಿಗೆ ಮತದಾನದ ಹಕ್ಕುಗಳನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಕಾನೂನು ಸಚಿವಾಲಯವು ಚಾಲನೆ ನೀಡಿದೆ ಎಂದು ಹೇಳಿದರು.

ಎನ್ನಾರೈಗಳಿಗೆ ಮತದಾನ ಹಕ್ಕು ನೀಡುವ ಬಗ್ಗೆ ಸರ್ಕಾರ ಶೀಘ್ರ ಸ್ಪಂದಿಸುತ್ತಿಲ್ಲವೇಕೆ? ಇದು ಕೇವಲ ಭರವಸೆ ಮಾತ್ರವೇ ಎಂದು ಇಂಡಿಯನ್ ಜಿಂಖಾನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್. ಕಲ್ಹಾನ್ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಮೊಯ್ಲಿ, 'ಇದಕ್ಕೆ ಸಂಬಂಧಪಟ್ಟ ಶಾಸನವನ್ನು ಶೀಘ್ರದಲ್ಲೇ ರೂಪಿಸಲಾಗುತ್ತದೆ' ಎಂದರು.

ವಿವಿಧ ದೇಶಗಳಲ್ಲಿರುವ ಭಾರತ ಸರಕಾರ ಕಚೇರಿಯಲ್ಲಿನ ಸಿಬ್ಬಂದಿಗಳಿಗೂ ಮತದಾನದ ವ್ಯವಸ್ಥೆಯನ್ನು ಮಾಡುವ ಕುರಿತು ಸರಕಾರ ಗಂಭೀರವಾಗಿ ಯೋಚಿಸುತ್ತಿದೆ. ಅಂದಾಜುಗಳ ಪ್ರಕಾರ ಸುಮಾರು 2.2 ಕೋಟಿ ಅನಿವಾಸಿ ಭಾರತೀಯರು ವಿಶ್ವದೆಲ್ಲೆಡೆ ಹಂಚಿ ಹೋಗಿದ್ದಾರೆ.

ಇತರ ದೇಶಗಳ ಪೌರತ್ವವನ್ನು ಪಡೆದಿರುವ ಭಾರತೀಯ ಮೂಲದವರಿಗೆ ಮತದಾನದ ಹಕ್ಕನ್ನು ನೀಡಲಾಗುವುದಿಲ್ಲ. ಯಾವುದೇ ದೇಶದ ಪೌರತ್ವವನ್ನು ಸ್ವೀಕರಿಸದಿರುವ ಭಾರತೀಯರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ಸಚಿವ ಮೊಯ್ಲಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X