ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಪಿಎಸ್ಎಲ್ ವಿ -ಸಿ15 ಯಶಸ್ವಿ ಉಡಾವಣೆ

By Mahesh
|
Google Oneindia Kannada News

ISRO launches five satellites into orbit
ಶ್ರೀ ಹರಿಕೋಟಾ, ಜು.12: ಇಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ಐದು ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ -ಸಿ15 ಅಂತರಿಕ್ಷ ಪಯಣ ಸರಾಗವಾಗಿ ಪಯಣಬೆಳೆಸಿತು. ಕರ್ನಾಟಕದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸ್ಟಡ್ ಸ್ಯಾಟ್ ಕೂಡಾ ಇಂದು ಉಡಾವಣೆಗೊಂಡ ಉಪಗ್ರಹಗಳ ಲ್ಲಿ ಸೇರಿರುವುದು ವಿಶೇಷ.

ಪಿಎಸ್ ಎಲ್ ವಿ-ಸಿ 15ಭಾರತದ ದೂರಸಂವೇದಿ ಉಪಗ್ರಹ ಕಾರ್ಟೋಸ್ಯಾಟ್ 2ಬಿ, ಅಲ್ಜೀರಿಯಾದ ಅಲ್ ಸ್ಯಾಟ್, ಕೆನಡಾ ಮತ್ತು ಸ್ವಿಟ್ಜರ್ಲೆಂಡಿನ ಎರಡು ನ್ಯಾನೋ ಉಪಗ್ರಹಗಳು ಮತ್ತು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಪಿಕೋ ಉಪಗ್ರಹ ಸೇರಿದಂತೆ ಒಟ್ಟು ಐದು ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಸೇರ್ಪಡೆಗೊಳಿಸಲಿದೆ.

ಕಾರ್ಟೋಸ್ಯಾಟ್ ಉಪಯೋಗ: ಹೆದ್ದಾರಿಗಳ ಮರುನಿರ್ಮಾಣ, ರಿಂಗ್ ರಸ್ತೆಗಳ ನಿರ್ಮಾಣ, ಮೂಲಸೌಕರ್ಯ ಅಭಿವೃದ್ದ್ಧಿ ಮತ್ತು ನಗರ ಯೋಜನೆಗೆ ಸಹಕಾರಿಯಾಗಲಿದೆ.

ಕಳೆದ ಏಪ್ರಿಲ್ ನಲ್ಲಿ ದೇಶಿಯ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಚಾಲಿತ ಮಹತ್ವಾಕಾಂಕ್ಷಿ ಜಿಎಸ್ಎಲ್ ವಿ-ಡಿ3 ವಿಫಲವಾದ ಬಳಿಕ ಸ್ವದೇಶಿ ನಿರ್ಮಿತ ಇಸ್ರೋ ಪ್ರಯೋಗ ಸಫಲವಾಗಿರುವುದು ಹರ್ಷ ತಂದಿದೆ ಎಂದು ಇಸ್ರೋ ವಕ್ತಾರ ಎಸ್ ಸತೀಶ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X