ಮಗು ಹೆತ್ತು ಟಾಯ್ಲೆಟ್ ಗೆ ಎಸೆದ ನಿರ್ದಯಿ ತಾಯಿ

Woman gives birth on plane, tries to flush her baby
ಅಮೃತಸರ್, ಜು.9: ಮಗುವಿಗೆ ವಿಮಾನದಲ್ಲೇ ಜನ್ಮ ನೀಡಿದ ಮಹಿಳಾ ಪ್ರಯಾಣಿಕಳೊಬ್ಬಳು ನಂತರ ಆ ಮಗವನ್ನು ಶೌಚ ಗುಂಡಿ(ಟಾಯ್ಲೆಟ್ )ಗೆ ಎಸೆದು ಹತ್ಯೆಗೆ ಪ್ರಯತ್ನಿಸಿದ ಘಟನೆ ರಷ್ಯಾದಿಂದ ಹೊರಟಿದ್ದ ತುರ್ಕ್ ಮೇನಿಸ್ತಾನದ ವಿಮಾನದಲ್ಲಿ ನಡೆದಿದೆ.

ವಿಮಾನ ಅಮೃತಸರಕ್ಕೆ ಬಂದಿಳಿದಾಗ, ವಿಮಾನ ಸಿಬ್ಬಂದಿ ಸ್ವಚ್ಛಗೊಳಿಸುವ ವೇಳೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಶೌಚ ಗುಂಡಿಯಲ್ಲಿ ಬಿದ್ದಿದ್ದ ಮಗುವನ್ನು ರಕ್ಷಿಸಿ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೌಚ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಗುವಿನ ತಲೆಯನ್ನು ವಿದ್ಯುತ್ ಕಟ್ಟರ್ ಬಳಸಿ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ತಾಯಿಯ ಸ್ಥಿತಿ ಸುಧಾರಿಸಿದ್ದು, ಮಗುವಿನ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಎಸ್ಕಾರ್ಟ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಎಚ್ ಪಿ ಸಿಂಗ್ ತಿಳಿಸಿದರು.

ಮಗುವನ್ನು ಟಾಯ್ಲೆಟ್ ಗೆ ಎಸೆದ ನಂತರ 22 ವರ್ಷದ ನಿರ್ದಯಿ ತಾಯಿ ನಿಲ್ದಾಣದಿಂದ ಪರಾರಿಯಾಗಲು ಯತ್ನಿಸಿದರು. ಆದರೆ ಪೊಲೀಸರ ಕಾರ್ಯಾಚರಣೆಯಲ್ಲಿ ಆಕೆ ಸಿಕ್ಕಿಬಿದ್ದಿದ್ದಾಳೆ. ಭಾರತೀಯ ದಂಡ ಸಂಹಿತೆ 315 ರ ಅನ್ವಯ ಕೇಸು ದಾಖಲಿಸಲಾಗಿದೆ.

ಆಕೆಗೆ ಇನ್ನೂ ವಿವಾಹವಾಗಿಲ್ಲ, ಅನೈತಿಕ ಸಂಬಂಧದಿಂದ ಹುಟ್ಟಿದ ಕೂಸಾದ್ದರಿಂದ ಟಾಯ್ಲೆಟ್ ನಲ್ಲಿ ಎಸೆದು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಳು ಎಂದು ಪೊಲೀಸರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+