ದೇಶದ ಗೋದಾಮುಗಳಲ್ಲಿ ಅಕ್ಕಿ ಎಷ್ಟಿದೆ ಗೊತ್ತಾ?

ಇದರಲ್ಲಿ 5 ಮಿಲಿಯ ಟನ್ ತುರ್ತು ದಾಸ್ತಾನು ಸೇರಿದೆ. ಜುಲೈ 1ಕ್ಕೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕೇಂದ್ರ ಪೂಲ್ ನಲ್ಲಿ 24.26 ಮಿಲಿಯ ಟನ್ ಗಳಷ್ಟು ದಾಸ್ತಾನು ಹೊಂದಿದ್ದು ನಿಯಮದ ಪ್ರಕಾರ 11.9 ಮಿಲಿಯನ್ ಟನ್ ದಾಸ್ತಾನು ಇರಬೇಕಾಗುತ್ತದೆ.
ಸರ್ಕಾರ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯವನ್ನು ಖರೀದಿಸಿದ್ದರಿಂದ ಈ ಹೆಚ್ಚಿನ ದಾಸ್ತಾನು ಆಗಿದೆ ಎನ್ನಲಾಗಿದ್ದು ಕಳೆದ ವರ್ಷ ಸರ್ಕಾರ 25.3 ಮಿಲಿಯ ಟನ್ ನಷ್ಟು ಗೋಧಿಯನ್ನು ಖರೀದಿಸಿತ್ತು.
ಈ ವರ್ಷ ಇಲ್ಲಿಯವರೆಗೆ 22.5 ಮಿಲಿಯನ್ ಟನ್ ಅಕ್ಕಿಯನ್ನು ಖರೀದಿಸಿದ್ದು ಒಟ್ಟು ದಾಸ್ತಾನು 33.6 ಮಿಲಿಯ ಟನ್ ಗಳಾಗಿವೆ. ಕಳೆದ ವರ್ಷದ ಬರದಿಂದಾಗಿ ದೇಶದ ಅಕ್ಕಿಯ ಉತ್ಪಾದನೆ ಒಟ್ಟು 89.31 ಟನ್ ಗಳಾಗಿತ್ತು.












Click it and Unblock the Notifications