ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್ ಗೆ ಸಹಕರಿಸಿ : ಗಡ್ಕರಿ

By Mrutyunjaya Kalmat
|
Google Oneindia Kannada News

Nitin Gadkari
ಬೆಂಗಳೂರು, ಜು. 4 : ತೈಲ ಬೆಲೆ ವಿರೋಧಿಸಿ ಬಿಜೆಪಿ ಮೈತ್ರಿ ಹಮ್ಮಿಕೊಂಡಿರುವ ಭಾರತ್ ಬಂದ್ ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮನವಿ ಮಾಡಿಕೊಂಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮೈತ್ರಿ ಕೂಟ ಎನ್ ಡಿಎ ದಿಲ್ಲಿ ಚುಕ್ಕಾಣಿ ಹಿಡಿಯಲಿದೆ ಎಂದು ಸಹ ಇದೇ ಸಂದರ್ಭದಲ್ಲಿ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1998ರಿಂದ 2004ರವರಗೆ ಎನ್ ಡಿಎ ಮೈತ್ರಿಕೂಟ ಉತ್ತಮ ಆಡಳಿತವನ್ನು ನೀಡಿದೆ ಎಂದರು. ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಯುಪಿಎ ಸರಕಾರದ ಜನವಿರೋಧಿ ಕ್ರಮಗಳನ್ನು ಖಂಡಿಸಿ ಬಿಜೆಪಿ ನೇತೃತ್ವದ ಎನ್ ಡಿಎ ಜುಲೈ 5ರಂದು ಭಾರತ್ ಬಂದ್ ಗೆ ಕರೆ ನೀಡಿದೆ. ಬಂದ್ ಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಬಿಜೆಪಿ ಹಿರಿಯ ನಾಯಕರಾಗಿದ್ದ ಜಸ್ವಂತ್ ಸಿಂಗ್ ಮತ್ತೆ ಪಕ್ಷಕ್ಕೆ ಮರಳುತ್ತಿರುವುದು ಸಂತಸದ ಸಂಗತಿ. ಜಿನ್ನಾ ಪರವಾಗಿ ಅವರ ಬರೆದಿರುವ ಪುಸ್ತಕದ ವಿವಾದ ಮುಗಿದ ಅಧ್ಯಾಯ. ಇದೀಗ ಅದರ ಬಗ್ಗೆ ಚರ್ಚೆ ನಡೆಸಿದರೆ ಪ್ರಯೋಜನವಿಲ್ಲ ಎಂದು ಗಡ್ಕರಿ ವಿವರಿಸಿದರು. ಪಾಕಿಸ್ತಾನದ ಜನಕ ಮೊಹ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿದ್ದರಿಂದ ಬಿಜೆಪಿ ಹೈಕಮಾಂಡ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X