ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಕ್ಕೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು

By Mahesh
|
Google Oneindia Kannada News

ರಿಯೋ ಡಿ ಜನೈರೋ, ಜು.4: "ಇದು ತುಂಬಾ ದುಃಖದ ಕ್ಷಣ. ಸೋಲಿಗಾಗಿ ಯಾರೂ ತಯಾರಿರುವುದಿಲ್ಲ. ನಾನು ನಾಲ್ಕು ವರ್ಷಗಳ ಹಿಂದೆ ಈ ಹುದ್ದೆ ವಹಿಸಿಕೊಂಡಿದ್ದು , ತಕ್ಕಮಟ್ಟಿಗೆ ಕರ್ತವ್ಯ ನಿರ್ವಹಿಸಿದ್ದೇನೆ" ಎಂದು ಬ್ರೆಜಿಲ್ ಫುಟ್ಬಾಲ್ ತಂಡದ ಕೋಚ್ ಡುಂಗಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕಾರ್ಲೊಸ್ ಕೆಟಾನೊ ಬ್ಲೆಡೊರ್ನ್ ವೆರಿ ಅಲಿಯಾಸ್ ಡುಂಗಾ 2006ರ ವಿಶ್ವಕಪ್ ಬಳಿಕ ಕಾರ್ಲೋಸ್ ಆಲ್ಬರ್ಟ್ ಪೆರೇರಾ ಅವರ ಸ್ಥಾನವನ್ನು ತುಂಬಿದ್ದರು. 2006ರಲ್ಲಿಯೂ ಬ್ರೆಜಿಲ್ ಕ್ವಾರ್ಟರ್ ಫೈನಲ್‌ನಲ್ಲಿಯೇ ಮುಗ್ಗರಿಸಿತ್ತು.

1994ರಲ್ಲಿ ಬ್ರೆಜಿಲ್ ವಿಶ್ವಕಪ್ ಗೆದ್ದಾಗ ತಂಡ ಡಿಫೆಂಡರ್ ಕಮ್ ಮಿಡ್ ಫೀಲ್ಡರ್ ಆಗಿದ್ದ ಡುಂಗಾ ತಂಡದ ನಾಯಕರಗಿದ್ದರು. 1998ರಲ್ಲಿ ಬ್ರೆಜಿಲ್ ರನ್ನರ್ ಅಪ್ ಆಗಿತ್ತು. ಕೋಚ್ ಆಗಿದ್ದ ಸಮಯದಲ್ಲಿ ಬ್ರೆಜಿಲ್ ತಂಡ 2007ರಲ್ಲಿ ಕೋಪಾ ಅಮೆರಿಕಾ ಕಪ್, 2009 ರಲ್ಲಿ ಕಾನ್ಫಡರೇಶನ್ ಕಪ್ ಗೆದ್ದಿತ್ತು.

ಆದರೆ ಕೋಚಿಂಗ್‌ನ ಯಾವುದೇ ಅನುಭವವಿಲ್ಲದೆ ಡುಂಗಾರನ್ನು ಈ ಹುದ್ದೆಗೆ ನೇಮಿಸಿದಾಗ ಹೆಚ್ಚಿನವರಿಗೆ ಅಚ್ಚರಿಯಾಗಿತ್ತು. ಆದರೆ ಡುಂಗಾ ತನ್ನ ತರಬೇತಿನ ಅವಧಿಯಲ್ಲಿ ತಂಡದ ಸ್ಟಾರ್ ಆಟಗಾರರಾದ ಕಫು, ರೊನಾಲ್ಡೋ ಮತ್ತು ರಾಬರ್ಟೋ ಕಾರ್ಲೋಸ್ ರನ್ನು ಬದಿಗೆ ಸರಿಸಿದ್ದರು. ಅಲ್ಲದೆ ರೊನಾಲ್ಡಿನೋ ಅವರನ್ನು ಕೂಡ ತಂಡದಿಂದ ಹೊರಗಿಟ್ಟಿದರು.

ಕೈಕೊಟ್ಟ ಡುಂಗಾ ರಕ್ಷಣಾ ತಂತ್ರ: ಬ್ರೆಜಿಲ್ ನ ಸಾಂಪ್ರದಾಯಿಕ ಶೈಲಿ ಕೈಬಿಟ್ಟು ರಕ್ಷಣಾ ತಂತ್ರಕ್ಕೆ ಶರಣು ಹೊಡೆದ ಡುಂಗಾರ ಕಾರ್ಯತಂತ್ರದ ಬಗ್ಗೆ ಅಭಿಮಾನಿಗಳು, ಫುಟ್ಬಾಲ್ ಪಂಡಿತರು ಟೀಕಿಸಿದ್ದಾರೆ.

ಹಾಲೆಂಡ್ ವಿರುದ್ಧ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ 1-2 ರಿಂದ ಸೋತಿರುವ ಬ್ರೆಜಿಲ್ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ, ಡುಂಗಾರ ಗೇಮ್ ಪ್ಲಾನ್ ಬಗ್ಗೆ ಭಾರಿ ಚರ್ಚೆಗಳು ನಡೆಯತೊಡಗಿದೆ.

ಸ್ವಯಂ ಗೋಲಿಗೆ ಕಾರಣರಾಗಿದ್ದಲ್ಲದೆ, ಕೆಂಪು ಕಾರ್ಡು ಪಡೆದು ಹೊರನಡೆದ ಫೆಲಿಫೆ ಮೆಲೊ ಬ್ರೆಜಿಲ್‌ಗೆ ಬರಲು ಅರ್ಹನಲ್ಲ ಎಂದು 2002 ರ ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡದ ಗೆಲುವಿಗೆ ಕಾರಣರಾಗಿದ್ದ ಖ್ಯಾತ ಸ್ಟ್ರೈಕರ್ ರೊನಾಲ್ಡೋ ತನ್ನ ಟ್ವೀಟ್ ಮಾಡಿದ್ದಾರೆ.

2014ರ ವಿಶ್ವಕಪ್‌ ಆಯೋಜನೆಯ ಹೊಣೆ ಹೊತ್ತಿರುವ ಬ್ರೆಜಿಲ್ ಗೆ ಈ ವಿಶ್ವಕಪ್ ನ ಸೋಲು ಹಲವು ಅಭಿಮಾನಿಗಳನ್ನು ಕೆರಳಿಸಿದೆ. ಡುಂಗಾ ವಿಶ್ವಕಪ್ ಗೆ ಆರಿಸಿದ ತಂಡದಲ್ಲಿ ಸ್ಟಾರ್ ಆಟಗಾರ ರೊನಾಲ್ಡಿನೋ, ಗನ್ಸೋ ಮತ್ತು ನೀಮ್ಯೂರ್ ಗೆ ಅವಕಾಶ ನೀಡಿರಲಿಲ್ಲ.

ಹಾಲೆಂಡ್ ವಿರುದ್ಧದ ಬ್ರೆಜಿಲ್ ಸೋತಿದ್ದನ್ನು ನೋಡಲಾಗದ 18 ರ ಹರೆಯ ಅಭಿಮಾನಿಯೊಬ್ಬ ಹೈಟಿಯಲ್ಲಿ ಚಲಿಸುವ ಕಾರಿಗೆ ಅಡ್ಡಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಂಬಾ ನೃತ್ಯದ ರಂಗು ಕಳೆಗುಂದಿದೆ.

English summary
dunga resigns after brazils world cup exit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X