ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಕಿಗೆ ಲಕ್ಷಾಂತರ ಬೆಲೆಯ ಶೇಂಗಾ ಆಹುತಿ

By Mrutyunjaya Kalmat
|
Google Oneindia Kannada News

Fire Accident
ಸವಣೂರ, ಜು. 3 : ನಗರದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಕಂಬಾಳಿಮಠ ಇಂಡಸ್ಟ್ರೀಯಲ್ಲಿ ಶುಕ್ರವಾರ ನಸುಕಿನ ಜಾವ ದೊಡ್ಡ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದ್ದು, ಅಪಾರ ಪ್ರಮಾಣದಲ್ಲಿ ಶೇಂಗಾ ಕಾಳುಗಳು ಸೇರಿ ಸುಮಾರು 65 ಲಕ್ಷ ರುಪಾಯಿ ಮೌಲ್ಯ ದಾಸ್ತಾನು ಬೆಂಕಿಗೆ ಆಹುತಿಯಾಗಿವೆ.

ಈ ಘಟನೆಯಲ್ಲಿ ಕಟ್ಟಡದಲ್ಲಿ ರಾಶಿ ಹಾಕಲಾಗಿದ್ದ 42 ರಿಂದ 45 ಲಕ್ಷ ರೂ ಮೌಲ್ಯದ ಅಂದಾಜು 800 ಕ್ವಿಂಟಾಲ್ ಶೇಂಗಾ ಕಾಳು ಹಾಗೂ ಅಂದಾಜು 20 ಲಕ್ಷ ರೂ ಮೌಲ್ಯದ ಕಟ್ಟಡ ಹಾಗೂ ಸಂಸ್ಕರಣಾ ಯಂತ್ರೋಪಕರಣ ಹಾನಿಗೆ ಒಳಗಾಗಿದೆ.

ಈ ಬೆಂಕಿ ಆಕಸ್ಮಿಕದಲ್ಲಿ ಸಂಸ್ಕರಣೆಗೊಂಡು ರಾಶಿ ಹಾಕಲಾಗಿದ್ದ 750 ಕ್ವಿಂಟಾಲ್ ಶೇಂಗಾ ಬೀಜ ಹಾಗೂ ಸಂಸ್ಕರಣೆಗೊಳ್ಳಬೇಕಿದ್ದ 105 ಕ್ವಿಂಟಾಲ್ ಶೇಂಗಾ ಕಾಯಿಗಳು ಅಗ್ನಿಗೆ ಆಹುತಿಯಾಗಿದೆ. ಸಂಸ್ಕರಣಾ ಘಟಕದ ಕಟ್ಟಡ ಹಾಗೂ ಯಂತ್ರೋಪಕರಣಗಳೂ ತೀವೃ ಸ್ವರೂಪದಲ್ಲಿ ಹಾನಿಗೀಡಾಗಿದ್ದು, ಒಟ್ಟು 65 ಲಕ್ಷ ರುಪಾಯಿಗಳ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಶೇಂಗಾ ಕಾಳು ಹಾಗೂ ಸಿಪ್ಪೆಯನ್ನು ಬೇರ್ಪಡಿಸುವ ಈ ಸಂಸ್ಕರಣಾ ಘಟಕದಲ್ಲಿ ರೈತರಿಂದ ಖರೀದಿಸಲಾಗಿದ್ದ 800 ಕ್ವಿಂಟಾಲ್ ಗೂ ಅಧಿಕ ಪ್ರಮಾಣದ ಶೇಂಗಾ ಕಾಳನ್ನು ಸಂಗ್ರಹಿಸಲಾಗಿತ್ತು. ಗುರುವಾರ ನಡುರಾತ್ರಿಯವರೆಗೂ ಶೇಂಗಾಕಾಯಿಯನ್ನು ಸಂಸ್ಕರಣೆಗೊಳಿಸಿ, ಕಾಳು ಬೇರ್ಪಡಿಸಲಾಗಿತ್ತು. ಕಟ್ಟಡದ ಒಳಭಾಗದಲ್ಲಿಯೇ ರಾಶಿ ಹಾಕಲಾಗಿದ್ದ ಶೇಂಗಾ ಕಾಳುಗಳು ಬೆಳಗಿನ ಜಾವ 4 ರ ಸುಮಾರಿಗೆ ಬೆಂಕಿಗೆ ಆಹುತಿಯಾಗಿದೆ.

ಶುಕ್ರವಾರ ನಸುಕಿನ ಜಾವ 4 ಗಂಟೆಯ ವೇಳೆಗೆ ನಗರದಲ್ಲಿ ಹೈವೋಲ್ಟೇಜ್ ವಿದ್ಯುತ್ ಪೂರೈಕೆಯಾಗ್ದಿದು, ಈ ಸಂದರ್ಭದಲ್ಲಿ ಕಟ್ಟಡದ ಹೊರಭಾಗದಲ್ಲಿನ ವಿದ್ಯುತ್ ಪರಿವರ್ತಕದಲ್ಲಿಯೂ ಬೆಂಕಿಯ ಕಿಡಿಗಳು ಹಾರಿದ್ದವು. ಕಟ್ಟಡದ ಒಳಭಾಗದಲ್ಲಿ ವಿದ್ಯುತ್ ಶಾಟ್‌ಸರ್ಕ್ಯೂಟ್ ಸಂಭವಿಸಿದೆ. ಅಲ್ಲಿ ಹಾಕಲಾಗಿದ್ದ 15 ವ್ಯಾಟ್ ಬಲ್ಬ ಒಡೆದು ಬೆಂಕಿ ಅನಾಹುತ ಸಂಭವಿಸಿದೆ ಎಂದು ಸಂಸ್ಕರಣಾ ಘಟಕದ ಮಾಲೀಕ ನಂದೀಶ್ವರಯ್ಯ ಕಂಬಾಳಿಮಠ ತಿಳಿಸಿದ್ದಾರೆ.

ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಿಗ್ಗಾಂವ ನಗರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಂತರ ಬೆಂಕಿಯನ್ನು ನಂದಿಸಿತು. ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X